Latest

ಕುಡಿದ ಮತ್ತಿನಲ್ಲಿ ಡಮ್ಮಿ ಪಿಸ್ತೂಲ್ ಎಂದು ತಲೆಗೆ ಶೂಟ್ ಮಾಡಿಕೊಂಡ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಡಮ್ಮಿ ಗನ್ ಎಂದು ಭಾವಿಸಿ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿಯನ್ನು ಸಿಧೇಶ್ ಜಂಗಮ್ ಎಂದು ಗುರುತಿಸಲಾಗಿದೆ. ಸಿಧೇಶ್ ತಂದೆ ಪ್ರಕಾಶ್ ಜಂಗಮ್ ಜೊತೆ ನೆರೆ ಮನೆಯ ಸ್ನೇಹಿತ ಭರತ್ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಪಾರ್ಟಿಯಲ್ಲಿ ಮದ್ಯಪಾನ ಮಾಡಿದ ನಂತರ ಇಸ್ಪೀಟ್ ಆಡಿಕೊಂಡು ಸಮಯ ಕಳೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Home add -Advt

ಇಸ್ಪೀಟ್ ಆಡುತ್ತಿದ್ದಾಗ ಅಲ್ಲೇ ಮನೆಯಲ್ಲಿ ಗನ್ ಇರುವುದು ಸಿಧೇಶ್ ಕಣ್ಣಿಗೆ ಬಿದ್ದಿದೆ. ಮೊದಲೇ ಕುಡಿದ ಅಮಲಿನಲ್ಲಿ ಇದ್ದ ಸಿಧೇಶ್ ಡಮ್ಮಿ ಗನ್ ಅನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ತೆಗೆದುಕೊಂಡು ತಲೆಗೆ ಶೂಟ್ ಮಾಡಿಕೊಂಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸಿದೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಸಿದೇಶ್ ಸಾವನ್ನಪ್ಪಿದ್ದ.

ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿ ಇದ್ದ ಐವರು ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಜೊತೆಗೆ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಪಿಸ್ತೂಲ್ ಮನೆಯಲ್ಲಿ ಇಟ್ಟುಕೊಂಡಿದ್ದಕ್ಕೆ ಭರತ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button