Latest

24 ಗಂಟೆಯಲ್ಲಿ ದೇಶದಲ್ಲಿ 294 ಜನ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 9887 ಹೊಸ ಕೋವಿಡ್-19 ಪಕ್ರರಣಗಳು ವರದಿಯಾಗಿವೆ. ಒಂದೇ ದಿನ ಭಾರತದಲ್ಲಿ 294 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಒಟ್ಟು 2,36,657 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದಲ್ಲಿ 1,15,942 ಸಕ್ರಿಯ ಪ್ರಕರಣಗಳಿದ್ದು, 1,14,073 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇದುವರೆಗೂ 6642 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತ ಇಟಲಿಯನ್ನು ಕೊರೊನಾ ಓಟದಲ್ಲಿ ಹಿಂದಿಕ್ಕಿ ವಿಶ್ವದ ಕೋವಿಡ್ ಪೀಡಿತ ಟಾಪ್ 10 ದೇಶಗಳಲ್ಲಿ 6ನೇ ಸ್ಥಾನದಲ್ಲಿದೆ.

Home add -Advt

ಇಟಲಿಯಲ್ಲಿ ಇದುವರೆಗೂ 2,34,531 ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಮೆರಿಕಾ, ಬ್ರೆಜಿಲ್, ರಷ್ಯಾ, ಸ್ಪೇನ್ ಮತ್ತು ಬ್ರಿಟನ್ ಕೊರೊನಾ ಪೀಡಿತ ಟಾಪ್ 5 ದೇಶಗಳಾಗಿವೆ.

Related Articles

Back to top button