
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶ್ರೀರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಕಿರಣ ಜಾಧವ ಹಾಗೂ ಕಾರ್ಯಕರ್ತರು ಪೂಜೆ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಿರಣ ಜಾಧವ ಅವರ ಸಂಪರ್ಕ ಕಾರ್ಯಾಲಯದಲ್ಲಿ ಸೇರಿದ ಕಾರ್ಯಕರ್ತರು ಈ ಕ್ಷಣಕ್ಕಾಗಿ ಸಂಭ್ರಮಿಸಿದರು. ಅಲ್ಲದೆ ಕಿರಣ ಜಾಧವ ಅವರು ಗಣೇಶ ನಂದಗಡಕರ್ ಮಹಾದೇವ ಆರ್ಕೆಡ್ ನಲ್ಲಿ ಆಯೋಜಿಸಿದ್ದ ಪೂಜೆಯಲ್ಲಿ, ಶನಿವಾರಕೂಟದಲ್ಲಿ ಆಯೋಜಿಸಲಾಗಿದ್ದ ಪೂಜೆಯಲ್ಲಿ, ಹಿಂದುಳಿದ ವರ್ಗಗಳ ವಿಭಾಗದಿಂದ ಹನುಮಾನ್ ಮಂದಿರದಲ್ಲಿ ಆಯೋಜಿಸಿದ್ದ ಪೂಜೆಯಲ್ಲಿ, ಶಹಾಪುರ ಮೀರಾಪುರದಲ್ಲಿ ರಾಮಮಂದಿರ ಟ್ರಸ್ಟ್ ಆಯೋಜಿಸಿದ್ದ ಪೂಜೆಯಲ್ಲಿ ಸಹ ಭಾಗವಹಿಸಿದ್ದರು.
ಗಣೇಶ ನಂದಗಡಕರ್, ಹನುಮಂತ ಕಾಗಲಕರ್, ಸಂತೋಶ ಪೆಡ್ನೇಕರ್, ವಿಜಯ ಕದಂ, ಶೇಷ ಜವಳಕರ್, ರಾಜನ್ ಜಾಧವ, ಲೀಲಾ ಟೋಪಣ್ಣವರ್, ಸುವರ್ಣಾ ಪಾಟೀಲ, ಕಾಂಚನ್ ಕೋಪರ್ಡೆ, ವಿನಾಯಕ ಮುಚ್ಚಂಡಿಕರ್, ಶಿವು ಬಾಲಾಜಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ