Kannada News

*ಯಳ್ಳೂರಿನಲ್ಲಿ ಕುಸ್ತಿ ಪಂದ್ಯಾವಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶ್ರೀ ಕಲ್ಮೇಶ್ವರ ದೇವರು, ಶ್ರೀಚಾಂಗಳೇಶ್ವರಿ ದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಕುಸ್ತಿ ಮೈದಾನದಲ್ಲಿ ಏ.13ರಂದು ಮಧ್ಯಾಹ್ನ 2 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಕುಸ್ತಿಪಟುಗಳಿಗೆ ‘ಲೋಕಮಾನ್ಯ ಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಕುಸ್ತಿಯ ಪಂದ್ಯಾವಳಿಯ ವಿಶೇಷತೆ ಎಂದರೇ, ಅಂತಾರಾಷ್ಟ್ರೀಯ ಕುಸ್ತಿಪಟು ಪೈಲವಾನ್ ಹುಸೇನ್ ಇರಾನ್ ಜತೆ ಭಾರತ ಕೇಸರಿ ಪೈಲವಾನ ಸುಮೀತ್ ಮಲೀಕ್ ಮುಖಾಮುಖಿಯಾಗಲಿದ್ದಾರೆ. 2ನೇ ಕುಸ್ತಿಯು ಪೈಲವಾನ ಶಿವರಾಜ ರಕ್ಷೆ ಜತೆ ದೆಹಲಿಯ ಗುರುಪ್ರೀತಿ ಸಿಂಗ್ ಸೆಣಸಾಟ ನಡೆಸಲಿದ್ದಾರೆ. ರಾಷ್ಟ್ರೀಯ, ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಕುಸ್ತಿಪಟುಗಳು ಸೇರಿದಂತೆ 72 ಜೋಡಿ ಕುಸ್ತಿಪಂದ್ಯಾವಳಿಯ ಆಕರ್ಷಣೆಯಾಗಿದೆ. ಈ ಪಂದ್ಯಾವಳಿ ನೇತೃತ್ವನ್ನು ಲೋಕಮಾನ್ಯ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಕಿರಣ ಠಾಕೂರ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ಪರಶುರಾಮಭಾವು ನಂದಿಹಳ್ಳಿ, ಉದ್ಯಮಿ ಆನಂದ ಅಕ್ನೋಜಿ, ಬಿಲ್ಡರ್ ಪ್ರಮೋದ ಪಾಟೀಲ, ನಿವೃತ್ತ ಯೋಧ ಚಂಗಪ್ಪ ಪಾಟೀಲ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಆಗಮಿಸುವ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಗಾಗಿ ಕುಸ್ತಿ ವಿಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

https://pragati.taskdun.com/belagaviganja-casetwo-accused-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button