ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ನಿಧನ ಹಿನ್ನಲೆಯಲ್ಲಿ ನಾಳೆ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಚಿದಾನಂದಮೂರ್ತಿಯವರ ಸಾವು ನೋವುಂಟು ಮಾಡಿದೆ. ಕನ್ನಡ ನಾಡು, ನುಡಿ ಅಸ್ಮಿತೆಗಾಗಿ ಹೋರಾಟ ಮಾಡುತ್ತಿದ್ದವರು. ಅವರ ನಿಧನದಿಂದ ಕನ್ನಡ ಸ್ವಾರಸ್ವತಲೋಕಕ್ಕೆ ತುಂಬಾ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ನಾನು ಹಿಂದೆ ಸಿಎಂ ಆಗಿದ್ದಾಗಲೇ ಚಿದಾಮೂರ್ತಿಯವರಿಗೆ ವಿಧಾನಪರಿಷತ್ ಸದಸ್ಯರಾಗಿ ಅಂತ ಕೇಳಿಕೊಂಡಿದ್ದೆ. ನನಗೆ ವಯಸ್ಸಾಗಿದೆ ಬೇರೆಯವರಿಗೆ ಮಾಡಿ ಅಂತ ಚಿ.ಮೂ ಹೇಳಿದ್ದರು ಎಂದು ಸಿಎಂ ಬಿಎಸ್ವೈ ಚಿದಾನಂದಮೂರ್ತಿಯವರ ಜೊತೆಗಿನ ನೆನಪು ಬಿಚ್ವಿಟ್ಟರು.
ಇನ್ನು ನಾಳೆ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಬರುವ ಹಿನ್ನೆಲೆ, ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನ ಮಾಡಲು ತೀರ್ಮಾನ ಮಾಡಲಾಗಿದೆ. ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸುಮನಹಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸುವ ಸಾದ್ಯತೆ ಇದೆ.
ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆ, ಚಿದಾನಂದಮೂರ್ತಿಯವರ ಅಂತ್ಯಸಂಸ್ಕಾರವನ್ನು ನಾಳೆ ನಡೆಸುವುದಾಗಿ ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜೊತೆಗೆ ಚಿಮೂ ಅವರ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್ಕುಮಾರ್ ಕುಟುಂಬಸ್ಥರಿಗೆ ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ