Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ 9ರಂದು ಯಕ್ಷಗಾನ: ಉಚಿತ ಪ್ರವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ತಂಡದಿಂದ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜೂ.9ರಂದು ಸಂಜೆ 6 ಗಂಟೆಗೆ ‘ಕಂಸ ದಿಗ್ವಿಜಯ, ಕಂಸವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

 ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆ, ಅನಿರುದ್ಧ ಹೆಗಡೆ ಮೃದಂಗ, ಗಣೇಶ ಗಾಂವ್ಕರ್ ಚಂಡೆ ಹಾಗೂ ವೇಷಭೂಷಣವನ್ನು ಕವಾಳೆ ಸಹೋದರರು ಪ್ರಸ್ತುತಪಡಿಸುವರು. ಮುಮ್ಮೇಳದಲ್ಲಿ ಸದಾಶಿವ ಭಟ್ ಮಳವಳ್ಳಿ ಹಾಗೂ ದೀಪಕ್ ಕುಂಕಿ ಸ್ತ್ರೀ ವೇಷ, ಶ್ರೀಧರ ಭಟ್ ಕಾಸರಕೋಡು ಹಾಸ್ಯ, ಪ್ರಸನ್ನ ಶೆಟ್ಟಿಗಾರ್, ಕಾರ್ತಿಕ್ ಚಿಟ್ಟಾಣಿ, ವಿನಯ ಬೇರೊಳ್ಳಿ, ಸನ್ಮಯ ಭಟ್, ದರ್ಶನ್ ಮುಗ್ವಾ, ಶ್ರೀಧರ ಅಣಲಗಾರ್ ಪಾತ್ರ ವಹಿಸಲಿದ್ದಾರೆ. ಯಕ್ಷಗಾನ ಪ್ರದರ್ಶನ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸತೀಶ್ ಭಟ್ ಅವರನ್ನು (ಮೊ.9448063816) ಸಂಪರ್ಕಿಸಬಹುದು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button