Kannada NewsLatest

ಯರನಾಳ ಗ್ರಾಮದಲ್ಲಿ 01 ಕೋಟಿ 20 ಲಕ್ಷ ರೂ. ಕಾಮಗಾರಿಗೆ ಪೂಜೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯರನಾಳ ಗ್ರಾಮದ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಗೆ ಸಚಿವೇ ಶಶಿಕಲಾ ಜೋಲ್ಲೆ ಇವರ ಪ್ರಯತ್ನದಿಂದ ಸಣ್ಣ ನಿರಾವರಿ ಇಲಾಖೆ ಅನುದಾನಡಿ 01 ಕೋಟಿ ಅನುದಾನ ಮಂಜೂರಾಗಿದ್ದು, ಸೇತುವೆ ನಿರ್ಮಾಣದಿಂದ ಜನರ ಸಂಚಾರ ಸುಗಮವಾಗಲಿದೆ ಎಂದು ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.

ಯರನಾಳ ಗ್ರಾಮದಲ್ಲಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಕಾಮಗಾರಿಗೆ ಸಂಸದ ಅಣ್ಣಾಸಾಹೇಬ ಜೋಲ್ಲೆ ಭೂಮಿಪೂಜೆ ನೇರವೆರಿಸಿದರು. ಇದೇ ವೇಳೆ ಯರನಾಳ ಗ್ರಾಮದಲ್ಲಿ ಬ್ರಿಡ್ಜ ಕಂ ಬಂದಾರ ನಿರ್ಮಾಣ ಕಾಮಗಾರಿ ಹಾಗೂ 12 ಲಕ್ಷ ವೇಚ್ಚದಲ್ಲಿ ನಿರ್ಮಿಸಲಾದ ಬಾಬು ಜಗಜಿವನರಾಂ ಭವನ ಉದ್ಘಾಟಿಸಿ ಮಾತನಾಡಿದ ಸಂಸದ ಅಣ್ಣಾಸಾಹೇಬ ಜೋಲ್ಲೆ, ನಿಪ್ಪಾಣಿ ಮತಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯ,ಕುಡಿಯುವ ನೀರು,ರಸ್ತೆ,ವೃತ್ತ ಅಗಲಿಕರಣ,ಸೇತುವೆ ನಿರ್ಮಾಣ,ಸರ್ಕಾರಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಶಾಲಾ ಕಾಲೇಜು ಸುಧಾರಣಗೆ ಅನುದಾನ ನಿಡಲಾಗಿದೆ. ಯರನಾಳ ಗ್ರಾಮದ ನಾಗರಿಕರ ಜೋತೆ ರೈತರು ಕೂಡ ಹಳ್ಳಕ್ಕೆ ಸೇತುವೆ ನಿರ್ಮಿಸಬೆಕೆಂದು ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣ ಜೋತೆಗೆ ಗ್ರಾಮದಲ್ಲಿ ರಸ್ತೆ, ಸಮುದಾಯ ಭವನ, ಅಂಗಣವಾಡಿ ಕಟ್ಟಡ,ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುದಾರಣೆ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿ.ಪಂ ಸದಸ್ಯ ಸಿದ್ಧು ನರಾಟೆ,ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ,ಪ್ರಣವ ಮಾನವಿ,ಸದ್ದಾಂ ನಗಾರಜಿ, ಬಂಟಿ ಪಾಟೀಲ,ಬಾಳಾಸಾಬ ಪಾಟೀಲ,ಗುಲಾಬರಾವ ಪಾಟೀಲ,ದಿಗ್ವಿಜಯ ನಿಂಬಾಳಕರ,ಸುನೀಲ ವಡಗಾವೆ,ಗ್ರಾ.ಪಂ ಅಧ್ಯಕ್ಷ ಸಂಜಯ ಪಾಟೀಲ,ಸುರೇಶ ಪವಾರ,ಜಿತೇಂದ್ರ ಕರಡೆ,ಅಶೋಕ ಐಹೋಳೆ,ತಾ.ಪಂ ಇ ಒ-ಮಂಜುನಾಥ ಉಳಾಗಡ್ಡೆ,ಸಣ್ಣ ನಿರಾವರಿ ಇಲಾಖೆ ಅಭಿಯಂತ ಲಮಾಣಿ,ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವದು ಒಂದು ಸವಾಲು: ಡಾ.ಎಸ್ ಸಿ ಧಾರವಾಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button