ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರೋಗ್ಯವು ಅಮೂಲ್ಯವಾದ ಸಂಪತ್ತು, ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವದು ಒಂದು ಸವಾಲಾಗಿ ಪರಿಣಮಿಸಿದೆ ಎಂದು ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್ ಸಿ ಧಾರವಾಡ ಹೇಳಿದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯ ಕಾರ್ಯಕ್ರಮವನ್ನು ಉಧ್ಘಾಟಿಸುತ್ತ ಮಾತನಾಡುತ್ತಿದ್ದರು. ನಾವು ಇಂದಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದಲ್ಲದೆ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವದು ನಮ್ಮ ಆದ್ಯ ಕರ್ತವ್ಯವಾಗಿದೆ. ಅಲ್ಲದೇ ವಿಶ್ವ ಆರೋಗ್ಯ ದಿನಾಚರಣೆಯ ಘೋಷವಾಖ್ಯವಾದ ಆರೋಗ್ಯಯುತ ವಿಶ್ವ ನೀರ್ಮಾಣ ಹಾಗೂ ನ್ಯಾಯಯುತ ಪಾಲನೆ ಎಂಬಂತೆ ಎಲ್ಲರಿಗೂ ಆರೊಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುವಂತಾಗಲಿ ಎಂದರು. ನಾವು ಕೊರೋನದ ಎರಡನೆಯ ಅಲೆಯನ್ನು ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಮೇಲಿಂದ ಮೇಲೆ ಸೋಪಿನಿಂದ ಕೈ ತೂಳೆಯುವದರಿಂದ ಮಾತ್ರ ಸಮರ್ಪಕವಾಗಿ ನಿಭಾಯಿಸಬಹುದಾಗಿದೆ ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನ ಲಸಿಕೆಯನ್ನು ಪಡೆದುಕೊಳ್ಳುವದರಿಂದ, ನಾವು ಸಧೃಡ ಭಾರತಕ್ಕೆ ಬುನಾದಿ ಹಾಕಲು ಸಹಕಾರಿಯಾಗುವುದು ಎಂದು ಕಿವಿಮಾತು ಹೇಳಿದರು.
ಹಿರಿಯ ವೈದ್ಯರಾದ ಡಾ. ಬಸವರಾಜ ಮಹಾಂತಶೆಟ್ಟಿ ಮಾತನಾಡುತ್ತಾ, ಪ್ರಮುಖವಾಗಿ ನಾವು ಕೊರೊನ ಲಸಿಕೆಯ ಬಗ್ಗೆ ಎಲ್ಲರಿಗೂ ಅರಿವು ನೀಡಿ, ಕೊರೊ£ ಲಸಿಕೆ ಹಾಕಿಕೊಳ್ಳುವಂತೆ ಪ್ರೆರೇಪಿಸಬೇಕೆಂದು ಕರೆ ನೀಡಿದರು. ಆರೋಗ್ಯವೇ ಭಾಗ್ಯ, ಆರೋಗ್ಯವನ್ನು ಕಾಪಾಡಿಕೊಂಡರೆ ನಾವು ಸಂತಸದ ಜೀವನವನ್ನು ಸಾಗಿಸಬಹುದುದೆಂದು ತಿಳಿ ಹೇಳಿದರು.
ಇನ್ನೊಬ್ಬ ಹೇಸರಾಂತ ವೈದ್ಯರಾದ ಡಾ. ಶ್ರೀಕಾಂತ ಮೇತ್ರಿ ಮಾತನಾಡುತ್ತಾ ನಿಯಮಿತ ಊಟ, ವ್ಯಾಯಾಮ, ಆಚಾರ, ವಿಚಾರ, ಧ್ಯಾನ ಮತ್ತು ಯೋಗಗಳನ್ನು ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಲ್ಲಿ ಆರೊಗ್ಯಕರ ಜೀವನ ನಡೆಸಲು ಅಗತ್ಯವಾಗಿವೆ. ಯಾಂತ್ರಿಕ ಜೀವನದ ಮೊರೆ ಹೋಗದೇ ದೈಹಿಕ ಶ್ರಮಕ್ಕೆ ಒತ್ತು ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ಎಲುಬುಕೀಲು ತಜ್ಞ ಡಾ. ಜಗದೀಶ ಸುರಣ್ಣವರ ಹಾಗೂ ನರ್ಸಿಂಗ ಅಧೀಕ್ಷಕಿ ಶ್ರೀಮತಿ ಇಂದುಮತಿ ವಾಘಮಾರೆ ಮತ್ತು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ 50ಕ್ಕೂ ಅಧಿಕ ನಾಗರಿಕರು ಪ್ರೇರೆಪಣೆಗೊಂಡು ಕೊರೊನಾ ಚುಚ್ಚುಮದ್ದನ್ನು ಪಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ