Kannada NewsKarnataka NewsLatest

*ಯಶ್ ಗದಗಕ್ಕೆ ತೆರಳಿದ್ದಾಗ ಮತ್ತೊಂದು ದುರಂತ; ಬೆಂಗಾವಲು ವಾಹನ ಡಿಕ್ಕಿಯಾಗಿ ಮತ್ತೋರ್ವ ಅಭಿಮಾನಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಗದಗ: ನಟ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಲು ಸಾಲು ದುರಂತ ಸಂಭವಿಸಿದೆ. ಯಶ್ ಹುಟ್ಟುಹಬ್ಬ ಎಂದು ಬೃಹತ್ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಅವಘಡದಿಂದ ಮೂರು ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ಹಿನ್ನೆಲೆಯಲ್ಲಿ ಮೃತ ಅಭಿಮಾನಿಗಳ ಕುಟುಂಬ ಭೇಟಿಯಾಗಿ ಯಶ್ ವಾಪಾಸ್ ಆಗುತ್ತಿದ್ದಾಗ ಯಶ್ ಬೆಂಗಾವಲು ವಾಹನ ಇನ್ನೋರ್ವ ಅಭಿಮಾನಿ ಬೈಕ್ ಗೆ ಡಿಕ್ಕಿಯಾಗಿದ್ದು ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.

ಕಟೌಟ್ ನಿರ್ಮಾಣ ವೇಳೆ ವಿದ್ಯುತ್ ತಂತಿ ತಗುಲಿ ಅಭಿಮನಿಗಳಾದ ಹನುಮಂತ, ಮುರಳಿ, ನವೀನ್ ಎಂಬುವವರು ಸಾವನ್ನಪ್ಪಿದ್ದು, ಗದಗದ ಗ್ರಾಮಕ್ಕೆ ತೆರಳಿ ಕುಟುಂಬದವರಿಗೆಸಾಂತ್ವನ ಹೇಳಿ ಯಶ್ ವಾಪಾಸ್ ಆಗುತ್ತಿದ್ದಾಗ ಮುಳಗುಂದ ಬಳಿ ಯಶ್ ಗೆ ಭದ್ರತೆ ನೀಡುತ್ತಿದ್ದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಯಶ್ ಅಭಿಮಾನಿ ನಿಖಿಲ್ ಗಂಭೀರವಾಗಿ ಗಾಯಗೊಂಡಿದ್ದ.

ತಕ್ಷಣ ಬೆಂಗಾವಲು ಪಡೆ ವಾಹನ ಪೊಲೀಸರು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ನಿಖಿಲ್ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಯಶ್ ಕೂಡ ಆಸ್ಪತ್ರೆಗೆ ತೆರಳಿ ಆತನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಆದರೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿಖಿಲ್ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾನೆ.

ಮೃತ ನಿಖಿಲ್ ಗದಗ ಗ್ರಾಮದ ಬಿಂಕದಕಟ್ಟಿ ಗ್ರಾಮದ ನಿವಾಸಿ. ಒಂದು ದುಇರಂತದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button