Latest

*ಡಿ.31ರ ಒಳಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯತ್ವ ನೊಂದಣಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನವೆಂಬರ್ ಒಂದರಿಂದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿ ಸದಸ್ಯತ್ವ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಡಿ.26ರ ವರೆಗೆ 19.67 ಲಕ್ಷ ಸದಸ್ಯರು ನೊಂದಣಿಯಾಗಿದ್ದಾರೆ. ಡಿ.31ರೊಳಗೆ 30ಲಕ್ಷ ಸದಸ್ಯರನ್ನು ನೊಂದಣಿ ಮಾಡಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಸ್ಥಗಿತಗೊಳಿಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರು. ಯೋಜನೆ ಅನುಷ್ಠಾನಕ್ಕೆ 300 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಸಹಕಾರ ಸಂಘಗಳ ಸದಸ್ಯರಾದವರು ಯೋಜನೆಯಡಿ ಸದಸ್ಯತ್ವ ಪಡೆಯಬಹುದು. ಹಳ್ಳಿಯಲ್ಲಿ ಜಮೀನು ಹೊಂದಿ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿದ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವವರೂ ಯಶಸ್ವಿನಿ ಯೋಜನೆಯ ಲಾಭ ಪಡೆಯಬಹುದು. ಇದುವರೆಗೂ ರಾಜ್ಯದ 267 ಆಸ್ಪತ್ರೆಗಳನ್ನು ಯೋಜನೆಯಡಿ ನೊಂದಾಯಿಸಲಾಗಿದೆ. 469 ಆಸ್ಪತ್ರೆಗಳು ನೊಂದಣಿಗೆ ಸಿದ್ದ ಇವೆ. ಕನಿಷ್ಠ ಮಾನದಂಡಗಳನ್ನು ಪೂರೈಸುವ ಖಾಸಗಿ ಆಸ್ಪತ್ರೆಗಳಿಗೂ ನೊಂದಣಿಗೆ ಅವಕಾಶ ನೀಡಲಾಗಿದೆ. ಪಟ್ಟಣ ಸಹಕಾರಿ ಸಂಘಗಳ ಸದಸ್ಯತ್ವ ಹೊಂದಿರುವವರು ಯೋಜನೆಯ ಲಾಭ ಪಡೆಯಬಹುದು. ಸಹಕಾರ ಇಲಾಖೆ ಅಧಿಕಾರಿಗಳು ಸದಸ್ಯತ್ವ ನೊಂದಣಿಯಲ್ಲಿ ಮಗ್ನರಾಗಿದ್ದಾರೆ. ಡಿ.31 ರ ಒಳಗೆ 30 ಲಕ್ಷ ಸದಸ್ಯರ ನೊಂದಣಿಯಾಗದಿದ್ದರೆ ಯಶಸ್ವಿನಿ ಯೋಜನೆ ಅನುಷ್ಠಾನ ಸಮಿತಿ ಅವಧಿಯ ವಿಸ್ತರಣೆ ಕುರಿತು ಕ್ರಮ ಕೈಗೊಳ್ಳಲಿದೆ ಎಂದರು.

ಹಾಸನ ಡಿ.ಸಿ.ಸಿ ಬ್ಯಾಂಕ್ ಅವ್ಯಹಾರ ತನಿಖೆಗೆ ಅಧಿಕಾರಿ ನೇಮಕ: ಇದೇ ಸಂದರ್ಭದಲ್ಲಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಸಂಬಂಧ ಒಟ್ಟು 5 ಆರೋಪಗಳ ವಿಚಾರಣೆಗೆ, ಸಂಘಗಳ ಕಾಯ್ದೆ 1959ರ ಕಲಂ 64ರ ಅಡಿ ಮೈಸೂರು ವಲಯದ ಸಹಾರ ಸಂಘಗಳ ಉಪ ನಿಬಂಧಕರನ್ನು ವಿಚಾರಣಾಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದರು.

ಮೂರು ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸಹಕಾರ ಇಲಾಖೆ ಆದೇಶಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

*ಒಂದು ದಿನ ಮೊದಲೇ ಚಳಿಗಾಲದ ಅಧಿವೇಶನ ಮುಕ್ತಾಯ?*

https://pragati.taskdun.com/belagaviwinter-sessiondecember-29th/

‘​ಕಳೆದ ಬಾರಿಗಿಂತ ಹೆಚ್ಚು ಬಹುಮತದಿಂದ ಲಕ್ಷ್ಮೀ ಹೆಬ್ಬಾಳಕರ್ ಆಯ್ಕೆ’

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button