ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಯಡಿಯೂರಪ್ಪ ಕೆಳಗಿಳಿಸದಂತೆ ಬಿಜೆಪಿ ಮೇಲೆ ತೀವ್ರ ಒತ್ತಡ ಬರುತ್ತಿದೆ. 25ಕ್ಕೂ ಹೆಚ್ಚು ಮಠಾಧೀಶರು ಸಹ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಬಿಜೆಪಿಗೆ ನೇರವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ, ನಳಿನ್ ಕುಮಾರ ಕಟೀಲು ವಿಡೀಯೋ ಬಹಿರಂಗವಾಗಿದ್ದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಜುಲೈ 26ರಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜುಲೈ 25ರ ರಾತ್ರಿ ಶಾಸಕರಿಗೆ ಭೋಜನಕೂಟ ಏರ್ಪಡಿಸಿದ್ದಾರೆ.
ಜುಲೈ 25 ಅಥವಾ 26ರಂದು ಯಡಿಯೂರಪ್ಪ ಶಾಸಕಾಂಗ ಸಭೆ ನಡೆಸಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಸ್ವತಃ ಯಡಿಯೂರಪ್ಪ ನವದೆಹಲಿಯಲ್ಲಿ, ಜುಲೈ 26ರಂದು ಶಾಸಕಾಂಗ ಸಭೆ ಕರೆಯುವುದಾಗಿ ಹೇಳಿಕೆ ನೀಡಿದ್ದರು. ನಂತರ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 25ರಂದು ಶಾಸಕಾಂಗ ಸಭೆ ನಡೆಸುವುದಾಗಿ ಹೇಳಿದ್ದರು.
ಆದರೆ ಅವರ ಆಪ್ತರು ಮತ್ತು ಅಧಿಕಾರಿ ವಲಯದ ಪ್ರಕಾರ, ಶಾಸಕರ ಭೋಜನ ಕೂಟ ಎಂದು ಹೇಳುವ ಬದಲು ಯಡಿಯೂರಪ್ಪ ಶಾಸಕಾಂಗ ಸಭೆ ಎಂದಿದ್ದಾರೆ. ಶಾಸಕಾಂಗ ಸಭೆಯ ಯೋಚನೆ ಇರಲೇ ಇಲ್ಲ.
ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ದಟ್ಟವಾಗಿ ಹಬ್ಬಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಈ ಭೋಜನ ಕೂಟ ಮಹತ್ವ ಪಡೆದಿದೆ. ಇದೊಂದು ಬೀಳ್ಕೊಡುಗೆ ಸಮಾರಂಭದ ರೀತಿ ಇರಲಿದೆ ಎನ್ನುವ ಮಾತನ್ನೂ ಕೆಲವರು ಆಡುತ್ತಿದ್ದಾರೆ.
ಈ ಮಧ್ಯೆ, ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಇದು ಸ್ಥಾನ ತೆರವು ಮಾಡಲು ಗಡುವು ನೀಡುವುದಕ್ಕಾಗಿಯೋ ಅಥವಾ ನೀವೇ ಮುಂದುವರಿಯಿರಿ, ಪಕ್ಷ ಬಲಪಡಿಸಿ ಎನ್ನುವ ಸೂಚನೆ ನೀಡುವುದಕ್ಕಾಗಿಯೋ ಎನ್ನುವ ಕುತೂಹಲ ಮೂಡಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಯಡಿಯೂರಪ್ಪ ಕೆಳಗಿಳಿಸದಂತೆ ಬಿಜೆಪಿ ಮೇಲೆ ತೀವ್ರ ಒತ್ತಡ ಬರುತ್ತಿದೆ. 25ಕ್ಕೂ ಹೆಚ್ಚು ಮಠಾಧೀಶರು ಸಹ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಬಿಜೆಪಿಗೆ ನೇರವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ, ನಳಿನ್ ಕುಮಾರ ಕಟೀಲು ವಿಡೀಯೋ ಬಹಿರಂಗವಾಗಿದ್ದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ದೊಡ್ಡಮಟ್ಟದ ಡ್ಯಾಮೇಜ್ ತಪ್ಪಿಸಿಕೊಳ್ಳುವುದಕ್ಕಾಗಿ ಯಡಿಯೂರಪ್ಪ ಅವರನ್ನೇ ಮುಂದಿನ ಚುನಾವಣೆವರೆಗೆ ಮುಂದುವರಿಸುವ ನಿರ್ಧಾರಕ್ಕೆ ಬರುವ ಸಾಧ್ಚತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ಗೆ ಮಠಾಧೀಶರ ಎಚ್ಚರಿಕೆ
ಸಂತೋಷ್/ ಲಕ್ಷ್ಮಣ ಸವದಿ ಸಿಎಂ, ಬಿಎಸ್ವೈ ಉಪರಾಷ್ಟ್ರಪತಿ: ಕರ್ನಾಟಕ ರಾಜಕೀಯದಲ್ಲಿ ಹೀಗೊಂದು ಸುದ್ದಿ
ನಳಿನ್ ಕುಮಾರ ಕಟೀಲು ಆಡಿಯೋ ಬಹಿರಂಗ: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸಾಧ್ಯತೆ (ಆಡಿಯೋ ಸಹಿತ ವರದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ