Latest

ನಟಿ ನತಾಶಾ ಜತೆ ನಿಶ್ಚಿತಾರ್ಥ ನೆರವೇರಿಸಿಕೊಂಡ ಹಾರ್ದಿಕ್ ಪಾಂಡ್ಯಾ

ಪ್ರಗತಿವಾಹಿನಿ ಸುದ್ದಿ, ಮುಂಬೈ:  ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸುವುದರ ಜೊತೆಗೆ ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ತನ್ನ ಗೆಳತಿ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್ಕೊವಿಚ್‌ ಜತೆ ನಿಶ್ಚಿತಾರ್ಥವಾದ ಸಂಗತಿಯನ್ನು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನತಾಶಾ ಹಾಗೂ ಹಾರ್ದಿಕ್ ಪಾಂಡ್ಯಾ ಪರಸ್ಪರ ಪ್ರೀತಿಸುತ್ತಿದ್ದ, ಸುತ್ತಾಟ ನಡೆಸುತ್ತಿದ್ದ ಬಗ್ಗೆ ಅದಾಗಲೇ ಜಗಜ್ಜಾಹೀರಾಗಿತ್ತು. ಆದರೆ ಇಬ್ಬರೂ ಎಂಗೇಜ್ಮೆಂಟ್ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ. ಇದೀಗ ಹೊಸ ವರ್ಷದ ಸಂಭ್ರಮದ ಜತೆಗೇ ಇಬ್ಬರೂ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.  ಈ ಬಗ್ಗೆ ಅಭಿಮಾನಿಗಳಿಗೆ  ಇನ್ ಸ್ಟಾಗ್ರಾಂ ನಲ್ಲಿ ನತಾಶಾ ಜತೆ  ನಿಶ್ಚಿತಾರ್ಥವಾದ ವಿಚಾರವನ್ನು ಫೋಟೋ, ವಿಡಿಯೋಗಳ ಸಮೇತ ಹಾರ್ದಿಕ್ ಶೇರ್ ಮಾಡಿ ಅಧಿಕೃತವಾಗಿ  ತಿಳಿಸಿದ್ದಾರೆ.

ನಿಶ್ಚಿತಾರ್ಥದ ಉಂಗುರ ಪ್ರದರ್ಶಿಸಿರುವ ಇಬ್ಬರೂ  ”ನಾನು ನಿನ್ನವನು.. ನೀನು ನನ್ನವಳು.. ಹಿಂದೂಸ್ತಾನದ ಎಲ್ಲರಿಗೂ ಈ ಸಂಗತಿ ತಿಳಿಯಲಿ” ಎಂದು ಹಾರ್ದಿಕ್‌ ಬರೆದುಕೊಂಡಿದ್ದಾರೆ.

ಹಾರ್ದಿಕ್‍ ಪಾಂಡ್ಯ ನಿಶ್ಚಿತಾರ್ಥಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪ್ಲೆಸೆಂಟ್ ಸರ್ಪ್ರೈಸ್, ನಿಮ್ಮ ಭವಿಷ್ಯ ಮತ್ತಷ್ಟು ಉತ್ತಮವಾಗಿರಲಿ ಎಂದು ಶುಭ ಕೋರಿದ್ದಾರೆ. ಇದೇ ವೇಳೆ ಕ್ರೆಕೆಟ್ ಆಟಗಾರರು, ಬಾಲಿವುಡ್ ನಟ, ನಟಿಯರು ನತಾಶಾ ಹಾಗೂ ಹಾರ್ದಿಕ್ ಗೆ ಶುಭಕೋರಿದ್ದಾರೆ.

Home add -Advt

Related Articles

Back to top button