Latest

ಕುಟುಂಬ ಸಹಿತ ರಾಯರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ: 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ತಿಲಕನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ವೇಳೆ ಯಡಿಯೂರಪ್ಪ ಅಭಿಮಾನಿಗಳು ಕೂಡ ಬಹುಸಂಖ್ಯೆಯಲ್ಲಿ ಹಾಜರಿದ್ದರು ಬಿಜೆಪಿ ಹಿರಿಯ ನಾಯಕನಿಗೆ ದೀರ್ಘಾಯುಷ್ಯ, ಆರೋಗ್ಯ, ಯಶಸ್ಸಿಗಾಗಿ ಹಾರೈಸಿದರು.

ರಾಯರ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ ವೈ, “ನನ್ನ ಹುಟ್ಟುಹಬ್ಬದ ದಿನವೇ ನನ್ನ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಯಾಗುತ್ತಿರುವುದು ಸಂತಸ ತಂದಿದೆ. ಇದೊಂದು ವಿಶೇಷ ಘಳಿಗೆ ಎಂದುಕೊಂಡಿದ್ದೇನೆ” ಎಂದರು.

Home add -Advt

“ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಂಪೂರ್ಣವಾಗಿ ದುಡಿಯಲಿದ್ದೇನೆ. ಮುಂದಿನ ಬಾರಿಯೂ ಮೋದಿಯವರೇ ಪ್ರಧಾನಿಯಾಗಬೇಕು. ರಾಜ್ಯದಲ್ಲಿ ಜನತೆಗೆ ಉತ್ತಮ ಆಡಳಿತ ನೀಡಿದ ಬಸವರಾಜ ಬೊಮ್ಮಾಯಿ ಅವರು ಸಹ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ಇದಕ್ಕಾಗಿ ಜನತೆ ಬಿಜೆಪಿಯನ್ನು ಬೆಂಬಲಿಸಬೇಕು” ಎಂದರು.

*ಶಿವಮೊಗ್ಗ ನೂತನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಲ್ಯಾಂಡ್*

https://pragati.taskdun.com/shivamogga-airportpm-narendra-modientry/

*ಬಿ.ಎಸ್.ವೈ ಪರಿಶ್ರಮಕ್ಕೆ ಸಂದ ಫಲ ಇದು; ಸಿಎಂ ಬೊಮ್ಮಾಯಿ*

https://pragati.taskdun.com/cm-basavaraj-bommaib-s-yedyurappashivamogga-airport/

ಜರ್ಮನಿಯಲ್ಲಿ ಕೆಲಸ ಮಾಡಲು ಭಾರತೀಯ ಟೆಕ್ಕಿಗಳು, ನುರಿತ ಕೆಲಸಗಾರರಿಗೆ ಆಹ್ವಾನ; ವಿಸಾ ಪ್ರಕ್ರಿಯೆ ಸರಳೀಕರಣಕ್ಕೆ ಸಿದ್ಧತೆ

https://pragati.taskdun.com/indian-techies-invited-to-work-in-germany-preparing-for-visa-process-simplification/

Related Articles

Back to top button