ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ನಿಯಂತ್ರಣ ಕುರಿತಂತೆ ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ಸಾದಕ ಬಾದಕಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ.
ಕೊರೋನಾ ಸಂಬಂಧಿತ ವಿವಿಧ ಜವಾಬ್ದಾರಿ ಹೊತ್ತಿರುವ ಸಚಿವರೊಂದಿಗೆ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಆಕ್ಸಿಜನ್ ಜವಾಬ್ದಾರಿ ಹೊತ್ತಿರುವ ಜಗದೀಶ ಶೆಟ್ಟರ್, ರೆಮ್ ಡಿಸಿವರ್ ಜವಾಬ್ದಾರಿ ಹೊತ್ತಿರುವ ಅಶ್ವತ್ಥ ನಾರಾಯಣ, ಬೆಡ್ ಜವಾಬ್ದಾರಿ ಹೊತ್ತಿರುವ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ, ವಾರ್ ರೂಂ ಜವಾಬ್ದಾರಿ ಹೊತ್ತಿರುವ ಅರವಿಂದ ಲಿಂಬಾವಳಿ ಮತ್ತು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಲಾಕ್ ಡೌನ್ ಮೊದಲ ದಿನದ ಪರಿಸ್ಥಿತಿಯ ಅವಲೋಖನದ ಜೊತೆಗೆ ಏನಾದರೂ ಬದಲಾವಣೆಯ ಅಗತ್ಯವಿದೆಯೇ ಎನ್ನುವ ಕುರಿತು ಚರ್ಚಿಸುವರು. ಈ ಎಲ್ಲ ಸಚಿವರಿಗೆ ಜವಾಬ್ದಾರಿ ವಹಿಸಿದ ನಂತರ ಆಗಿರುವ ಬದಲಾವಣೆ ಮತ್ತು ಅವರ ಅಭಿಪ್ರಾಯಗಳ ಕುರಿತು ಚರ್ಚಿಸುವರು.
ಸಚಿವರು ನೀಡುವ ಮಾಹಿತಿಯ ಮೇರೆಗೆ ಲಾಕ್ ಡೌನ್ ನಿಯಮದಲ್ಲಿ ಬದಲಾವಣೆ ಕುರಿತಂತೆ ಮತ್ತು ತೆಗೆದುಕೊಳ್ಳಬೇಕಾದ ಇತರ ಕ್ರಮಗಳ ಬಗ್ಗೆ ನಿರ್ಧರಿಸಲಾಗುತ್ತದೆ.
ಶೆಟ್ಟರ್ ಗೆ ಆಕ್ಸಿಜನ್, ಅಶ್ವತ್ಥನಾರಾಯಣಗೆ ರೆಮ್ ಡಿಸಿವರ್, ಬೊಮ್ಮಾಯಿ, ಅಶೋಕಗೆ ಬೆಡ್, ಲಿಂಬಾವಳಿಗೆ ವಾರ್ ರೂಂ
ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.1.02
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ