ಯೆಸ್ ಬ್ಯಾಂಕ್ ಗ್ರಾಹಕರಿಗೆ ಶೀಘ್ರವೇ ರಿಲೀಫ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯೆಸ್ ಬ್ಯಾಂಕ್​ ಗ್ರಾಹಕರು ಹಣ ಪಡೆಯಲು ನಿಗದಿಪಡಿಸಿದ್ದ 50 ಸಾವಿರ ರೂಪಾಯಿ ಮಿತಿಯನ್ನು ವಾರಾಂತ್ಯದಲ್ಲಿ ತೆಗೆಯಲಾಗುವುದು. ಗ್ರಾಹಕರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಬ್ಯಾಂಕ್​ನ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ ಹಿನ್ನಲೆಯಲ್ಲಿ ಯೆಸ್ ಬ್ಯಾಂಕ್ ನನ್ನು ಸುಪರ್ದಿಗೆ ಪಡೆದುಕೊಂಡಿದ್ದ ಆರ್ ಬಿಐ, ಗ್ರಾಹರಿಗೆ ವಿತ್ ಡ್ರಾ ಮಿತಿಯನ್ನು ತಿಂಗಳಿಗೆ 50ಸಾವಿರಕ್ಕಿಂತ ಹೆಚ್ಚು ತೆಗೆಯದಂತೆ ನಿರ್ಬಂಧ ವಿಧಿಸಿತ್ತು. ಈ ಹಿನ್ನಲೆಯಲ್ಲಿ ದೇಶಾದ್ಯಂತ ಯೆಸ್ ಬ್ಯಾಂಕ್ ಗ್ರಾಹಕರು ಆತಂಕಕ್ಕೀಡಾಗಿದ್ದರು.

ಇದೀಗ ಬ್ಯಾಂಕ್ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್, ಗ್ರಾಹಕರು ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ನಿಮ್ಮ ಹಣ ಭದ್ರವಾಗಿದೆ. ಹಣ ತೆಗೆಯಲು ಹಾಕಿರುವ ಮಿತಿಯನ್ನು ಸಹ ಶೀಘ್ರದಲ್ಲಿ ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗ್ರಾಹಕರೇ ನಮ್ಮ ಮೊದಲ ಆದ್ಯತೆ. ಬೇರೆ ಬ್ಯಾಂಕ್ ಎಟಿಎಂ​ಗಳನ್ನು ಯೆಸ್ ಬ್ಯಾಂಕ್ ಗ್ರಾಹಕರು ಶನಿವಾರದಿಂದಲೇ ಬಳಸಲು ಅನುವು ಮಾಡಲಾಗಿದೆ. ಎಲ್ಲಾ ರೀತಿಯ ಬ್ಯಾಂಕ್ ಸೇವೆಗಳನ್ನು ಶೀಘ್ರದಲ್ಲಿ ಗ್ರಾಹಕರಿಗೆ ಒದಗಿಸಬೇಕು ಎಂಬುದು ನಮ್ಮ ಗುರಿ ಎಂದು ಹೇಳಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button