Kannada NewsLatest

ಪ್ರವಾಹ ಸಂತ್ರಸ್ತರಿಗೆ ನೀವೂ ಸಹಾಯ ಹಸ್ತ ಚಾಚಬಹುದು

ಪ್ರವಾಹ ಸಂತ್ರಸ್ತರಿಗೆ ನೀವೂ ಸಹಾಯ ಹಸ್ತ ಚಾಚಬಹುದು

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ವಿಪರೀತ ಮಳೆ ಹಾಗೂ ನದಿಗಳ ನೆರೆಯಿಂದ ತೀವ್ರವಾಗಿ ತೊಂದರೆಗೆ ಒಳಗಾಗಿರುವ ಜನರಿಗೆ ಸಹಾಯ ಮಾಡಲು ಬಯಸುವವರು ಜೀವನಾವಶ್ಯಕ ವಸ್ತುಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ.

ಅಡುಗೆ ಸಾಮಗ್ರಿಗಳು (ರವಾ, ಗೋಧಿ ಹಿಟ್ಟು, ಸಕ್ಕರೆ, ಚಹಾ ಪಾವಡರ್, ಬೋರ್ನವಿಟಾ, ಬೇಳೆ ಕಾಳುಗಳು ಇತ್ಯಾದಿ), ಗ್ಯಾಸ್ ಸ್ಟೋ, ಪ್ಲ್ಯಾಸ್ಟಿಕ್ ಬಕೇಟ್ ಮತ್ತು ಮಗ್‍ಗಳು, ಹೊಸ ರೇನಕೋಟ್ಸ್, ಹೊಸ ಶರ್ಟ್, ಪ್ಯಾಂಟ್, ಟಿ ಶರ್ಟ್, ಧೋತಿ, ಚೂಡಿದಾರ, ಸೀರೆ, ಲುಂಗಿ, ನೈಟಿ ಮುಂತಾದ ದೈನಂದಿನ ಉಡುಪುಗಳು, ಹೊಸ ಪಾದರಕ್ಷೆಗಳು, ಗಂಬೂಟ, ಗ್ಲೌಸ್, ಮಾಸ್ಕ್, ಹೊಸ ಸ್ಯಾನಿಟರಿ ನ್ಯಾಪ್‍ಕಿನ್ಸ್, ಡೈಪರ್ಸ್, ಹೊಸ ಪ್ಲ್ಯಾಸ್ಟಿಕ್ ಮ್ಯಾಟ್‍ಗಳು, ಕೊಡೆಗಳು (ಛತ್ರಿ), ಹೊಸ ಬೆಡ್‍ಶೀಟ್, ದಿಂಬು, ಬ್ಲ್ಯಾಂಕೇಟ್ಸ್ (ಹೊದಿಕೆಗಳು), ಹೊಸ ಸ್ವೆಟರ್ಸ್, ಸ್ಕಾರ್ಪ, ಬೇಬಿ ಕ್ಯಾಪ್, ಮಂಕಿ ಕ್ಯಾಪ್‍ಗಳನ್ನು ನೀಡಬಹುದು. ಆದರೆ ಉಪಯೋಗಿಸಿದ ವಸ್ತುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ – ದುರುಪಯೋಗ ಆಗದಿರಲಿ ಪ್ರವಾಹ ಪರಿಹಾರ; ಇಂದು ಡಿಸಿ ಮಾರ್ಗಸೂಚಿ

ಅವಧಿ ಮೀರಿರದ ಸೊಳ್ಳೆ ಬತ್ತಿಗಳು ಹಾಗೂ ಲಿಕ್ವಿಡ್‍ಗಳು, ಓಡೊಮಸ್, ಡ್ರೈ ಫ್ರುಟ್ಸ್, ಟಾಯ್ಲೆಟ್ ಕ್ಲೀನಿಂಗ್ ಸಾಮಗ್ರಿಗಳು (ಹಾರ್ಪಿಕ್, ಹೊಸ ಬ್ರಷ್ ಇತ್ಯಾದಿ), ಟಾರ್ಚ ಲೈಟ್ಸ್, ಸ್ಯಾನಿಟೈಸರ್, ಡೆಟ್ಟಾಲ್, ಸಾವ್ಲಾನ್, ಡಸ್ಟ್ಟ್‍ಬಿನ್ಸ್, ಫಿನಾಯಿಲ್, ಬ್ಲೀಚಿಂಗ್ ಪೌಡರ್, ಸ್ನಾನದ ಸಾಬೂನು, ಬಟ್ಟೆ ತೋಳೆಯುವ ಸಾಬೂನು, ಶಾಂಪೂ, ಟೂತ್ ಪೇಸ್ಟ್, ಬ್ರಷ್, ಆ್ಯಂಟಿ ಸೆಪ್ಟಿಕ್ ಲೋಶನ್, ಆ್ಯಂಟಿ ಫಂಗಸ್ ಪೌಡರ್, ಅಡುಗೆ ಎಣ್ಣೆ, ಶುದ್ಧ ಕುಡಿಯುವ ನೀರಿನ ಬಾಟಲ್‍ಗಳು, ಬಿಸ್ಕಿಟ್ ಹಾಗೂ ಮುಂತಾದ ಒಣ ಪದಾರ್ಥಗಳ ತಿಂಡಿ ತಿನಿಸುಗಳು ಇತ್ಯಾದಿ.

ಹೊಸ ಅಡುಗೆ ಪಾತ್ರೆಗಳು, ಮೇಣದಬತ್ತಿಗಳು, ಬೆಂಕಿಪೊಟ್ಟಣ, ಬಾಚಣಿಕೆ, ಹೊಸ ಸ್ನಾನದ ಟಾವೆಲ್‍ಗಳು, ಹೊಸ ಒಳ ಉಡುಪುಗಳು, ಶಾಲಾ ಮತ್ತು ಲಗೇಜ್ ಹೊಸ ಬ್ಯಾಗ್‍ಗಳು, ಪ್ರವಾಹದಿಂದ ಬಾಧಿತಗೊಂಡ ಕುಟುಂಬಗಳಿಗೆ ಸಂಘ ಸಂಸ್ಥೆಗಳು, ಸ್ವಯಂಪ್ರೇರಿತ ದಾನಿಗಳು ಸ್ವಇಚ್ಚೆಯಿಂದ ಉತ್ತಮ ಸ್ಥಿತಿಯಲ್ಲಿರುವ ಹೊಸ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಇಚ್ಚಿಸಿದಲ್ಲಿ ಬೆಳಗಾವಿ ನಗರ ಸೇರಿದಂತೆ ಗೋಕಾಕ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಖಾನಾಪೂರ, ಹುಕ್ಕೇರಿ, ಮೂಡಲಗಿ, ಕಾಗವಾಡ, ಬೈಲಹೊಂಗಲ, ಕಿತ್ತೂರ ಮತ್ತು ಸವದತ್ತಿ ತಾಲ್ಲೂಕುಗಳ ಭಾಗದ ಗ್ರಾಮೀಣ ಭಾಗಗಳ ಜನರಿಗೆ ಅತೀ ಅವಶ್ಯವಿರುವ ಸಾಮಗ್ರಿಗಳನ್ನು ತಾಲ್ಲೂಕುವಾರು ಪೂರೈಸಬಹುದು ಹಾಗೂ ಹಳೆಯ, ಉಪಯೋಗಿಸಲಾದ ಸಾಮಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button