Kannada NewsKarnataka NewsLatest

*ಕರ್ನಾಟಕಕ್ಕೆ ಮೊದಲ ಹವಾಮಾನ ರಾಯಭಾರಿ: ಐಎಸ್ ಉಪೇಂದ್ರ ತ್ರಿಪಾಟಿಗೆ ಸಿಎಂ ಗೌರವ ಸಲಹೆಗಾರರ ಸ್ಥಾನ*


“ಕರ್ನಾಟಕಕ್ಕೆ ಮೊದಲ ಹವಾಮಾನ ರಾಯಭಾರಿ: ಐಎಸ್ ಉಪೇಂದ್ರ ತ್ರಿಪಾಟಿಗೆ ಸಿಎಂ ಗೌರವ ಸಲಹೆಗಾರರ ಸ್ಥಾನ”

ಬೆಂಗಳೂರು: ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯಕ್ಕೆ ಮೊದಲ “ಹವಾಮಾನ ರಾಯಭಾರಿ Climate Ambassador” ಆಗಿ ಹಿರಿಯ ಐಎಸ್ ಅಧಿಕಾರಿ ಶ್ರೀ ಉಪೇಂದ್ರ ತ್ರಿಪಾಟಿ, ಐಎಎಸ್ (ನಿ.) ಅವರನ್ನು ನೇಮಿಸಲಾಗಿದೆ.

Home add -Advt

24.06.2026 ರಂದು ಹೊರಡಿಸಲಾದ ಸರ್ಕಾರಿ ಅಧಿಸೂಚನೆಯ ಪ್ರಕಾರ, ಉಪೇಂದ್ರ ತ್ರಿಪಾಟಿ ಅವರು ಇದರ ಜೊತೆಗೆ ಮುಖ್ಯಮಂತ್ರಿಯವರ ಗೌರವ ಸಲಹೆಗಾರರಾಗಿ ಸಹ ಕಾರ್ಯನಿರ್ವಹಿಸಲಿದ್ದಾರೆ.

ಸರ್ಕಾರ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವ ಈ ನೇಮಕಾತಿ ಮುಂದಿನ ಆದೇಶದವರೆಗೆ ಇರಲಿದೆ.

ಸಂಭಾವನೆ ರಹಿತ ನೇಮಕ
ಈ ಹುದ್ದೆಗೆ ಯಾವುದೇ ಸಂಭಾವನೆ, ಭತ್ಯೆ ಇರುವುದಿಲ್ಲ. ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ, ಹಸಿರು ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರಕ್ಕೆ ನೀತಿ ಸಲಹೆ ನೀಡುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.

ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳನ್ನು ಎದುರಿಸಲು ಮತ್ತು ಕರ್ನಾಟಕವನ್ನು “ಹಸಿರು ರಾಜ್ಯ”ವನ್ನಾಗಿ ರೂಪಿಸಲು ಈ ನೇಮಕಾತಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


  1. ಮೊದಲ ಬಾರಿಗೆ: ಕರ್ನಾಟಕಕ್ಕೆ ಮೊದಲ ಹವಾಮಾನ ರಾಯಭಾರಿ Climate Ambassador ನೇಮಕ
  2. ಯಾರು: ಹಿರಿಯ ಐಎಎಸ್ ಉಪೇಂದ್ರ ತ್ರಿಪಾಟಿ. ಸಿಎಂ ಗೌರವ ಸಲಹೆಗಾರರಾಗಿಯೂ ನೇಮಕ
  3. ಸ್ಥಾನಮಾನ: ರಾಜ್ಯ ಸಚಿವ ದರ್ಜೆ ಸ್ಥಾನಮಾನ. ಸಂಭಾವನೆ ರಹಿತ, ತಕ್ಷಣ ಜಾರಿ

Related Articles

Back to top button