Belagavi NewsBelgaum News

*ಬೈಕ್ ನಿಂದ ಬಿದ್ದು ನವವಿವಾಹಿತ ಸಾವು*

ಪ್ರಗತಿವಾಹಿನಿ ಸುದ್ದಿ: ನಾಗರಮುನ್ನೋಳಿ: ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿ ಹೊರವಲಯದ ಜೋಡಕುರಳಿ ರಸ್ತೆಯ ತಿರುವಿನಲ್ಲಿ ನವವಿವಾಹಿತ ಬೈಕ್ ನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ನವವಿವಾಹಿತ 22 ವರ್ಷದ ಉಮೇಶ್ ಮಲ್ಲಪ್ಪಾ ಬಸನಾಳೆ ಮೃತ ದುರ್ದೈವಿ. ಚಿಕ್ಕೋಡಿ ತಾಲೂಕಿನ ಅರಭ್ಯಾನವಾಡಿ ಗ್ರಾಮದವನು.

Home add -Advt

ಒಂದು ತಿಂಗಳ ಹಿಂದೆ ನಿಪನಾಳ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿದ್ದ ಉಮೇಶ್ ನಿಪನಾಳ ಗ್ರಾಮಕ್ಕೆ ಹೋಗುವಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿರುತ್ತಾರೆ.

Related Articles

Back to top button