Kannada NewsKarnataka NewsLatest

*ಹೋಟೆಲ್ ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ; FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಗೆ ಬಂದಿದ್ದ ಯುವತಿಯರು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಗ್ಯಾಂಗ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ವಿಜಯನಗರದ ನಮ್ಮೂಟ ಹೋಟೆಲ್ ನಲ್ಲಿ ಕಾಮುಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ದೃಶ್ಯ ಸುಇಸಿಟಿಯಲ್ಲಿ ಸೆರೆಯಾಗಿತ್ತು. ಇದಕ್ಕೂ ಮೊದಲು ಕಾಮುಕ ಯುವಕ ಇನ್ನಿಬ್ಬರು ಯುವಕರೊಂದಿಗೆ ಪ್ಲಾನ್ ಮಾಡಿಕೊಂಡು ಈ ರೀತಿ ಕೃತ್ಯವೆಸಗಿರುವುದು ಬಯಲಾಗಿದೆ.

Related Articles

ಹೋಟೆಲ್ ಗೆ ಬಂದಿದ್ದ ಯುವತಿ ತಿಂಡಿಗೆ ಆರ್ಡರ್ ಮಾಡುತ್ತಿದ್ದ ವೇಳೆ ಯುವಕನೊಬ್ಬ ಹಿಂಬದಿಯಿಂದ ಬಂದು ಆಕೆಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಟಚ್ ಮಾಡಿ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿದ್ದಾನೆ.

ಮೂವರು ಯುವಕರ ಗುಂಪು ಮಾತನಾಡಿಕೊಂಡು ಹೋಟೆಲ್ ಗೆ ಬರುವ ಯುವತಿಯರು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಿಕೃತಿ ಮೆರೆಯುತ್ತಿದ್ದರು ಎಂಬುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

Home add -Advt

ಸಿಸಿಟಿವಿ ದೃಶ್ಯಾವಳಿಯ ಆಧಾರಾದ ಮೇಲೆ ವಿಜಯನಗರ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಅಲ್ಲದೇ ಕಾಮುಕ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ.


Related Articles

Back to top button