Latest

ಯುವಕನ ಮೇಲೆ ಯುವತಿಯರಿಂದಲೇ ಲೈಂಗಿಕ ದೌರ್ಜನ್ಯ

ಪ್ರಗತಿವಾಹಿನಿ ಸುದ್ದಿ; ಜಲಂಧರ್: ನಾಲ್ವರು ಯುವತಿಯರು ಯುವಕನೊಬ್ಬನ ಮೇಲೆ ಅತ್ಯಾಚಾರವೆಸಗಿರುವ ವಿಚಿತ್ರ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.

ಯುವಕ ರ್ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ನಿನ್ನೆ ರಾತ್ರಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ನಾಲ್ವರು ಯುವತಿಯರು ಯುವಕನಿಗೆ ಬಲವಂತದಿಂದ ಮಧ್ಯ ಕುಡಿಸಿ ಆತನ ಮೆಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸ್ವತ: ಯುವಕ ಹೇಳಿಕೆ ನೀಡಿದ್ದು, ತಾನು ರಸ್ತೆ ಬದಿ ಹೋಗುತ್ತಿದ್ದಾಗ ಕಾರೊಂದು ತನ್ನ ಬಳಿ ಬಂದು ನಿಂತಿದೆ. ಕಾರಿನಲ್ಲಿದ್ದ ಯುವತಿಯೊಬ್ಬಳು ಸ್ಲಿಪ್ ತೋರಿಸಿ ಈ ವಿಳಾಸ ಹೇಳುವಂತೆ ಕೇಳಿದ್ದಾಳೆ. ಬಳಿಕ ನನ್ನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು ಕಾರಿನೊಳಗೆ ಎಳೆದೊಯ್ದು ಕೈ-ಕಾಲು ಕಟ್ಟಿ ಹಾಕಿದರು. ಹಾಗಾಗಿ ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗುವ ಸ್ಥಿತಿಯಲ್ಲಿರಲಿಲ್ಲ. ಯುವತಿಯರು ಇಂಗ್ಲೀಷ್, ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಯುವತಿಯರು ಮದ್ಯಪಾನ ಮಾಡಿದ್ದರು.ಅಲ್ಲದೇ ತನಗೂ ಬಲವಂತವಾಗಿ ಮದ್ಯ ಕುಡಿಸಿ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ.

Home add -Advt

ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ; ಸ್ಫೋಟದ ಹೊಣೆಹೊತ್ತ ಉಗ್ರ

https://pragati.taskdun.com/mangalore-blast-caseislamic-resistance-counciltemple-target/

Related Articles

Back to top button