
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಯುವತಿಯೋರ್ವಳನ್ನು ಭೀಕರವಾಗಿ ಕೊಚ್ಚೆ ಕೊಲೆ ಮಾಡಲಾಗಿದೆ.

ಬುಧವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸೆಕ್ಯುರಿಟ್ ಕೆಲಸ ಮಾಡುತ್ತಿದ್ದ ಬೈಲಹೊಂಗಲ ತಾಲೂಕು ಮೂಗಬಸವದ ಸುಧಾರಾಣಿ ಬಸಪ್ಪ ಹಡಪದ ಕೊಲೆಯಾದವಳು. ಆಸ್ಪತ್ರೆಯ ಕ್ಯಾಂಟನ್ ಸಮೀಪ ಈ ಘಟನೆ ನಡೆದಿದೆ. ಈರಣ್ಣ ಜಗಜಂಪಿ ಎಂಬಾತ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ. ಸುಧಾರಾಣಿ ಡ್ಯೂಟಿ ಮುಗಿಸು ಹೊರಟವಳು ಅವನೊಂದಿಗೆ ಮಾತನಾಡುತ್ತ ನಿಂತಿದ್ದಳು. ಆ ವೇಳೆ ಇದ್ದಕ್ಕಿದ್ದಂತೆ ಜಗಜಂಪಿ ಆಕೆಯ ಮೇಲೆ ತಲವಾರ್ ಬೀಸಿ ಕೊಚ್ಚಿ ಹಾಕಿದ ಎಂದು ಪ್ರತ್ಯಕ್ಷ ದರ್ಶಿ ಗಾಯತ್ರಿ ಚಿದಾನಂದ ಕಲ್ಮಠ ಎನ್ನುವ ಸಹ ಸೆಕ್ಯುರಿಟಿ ತಿಳಿಸಿದ್ದಾರೆ.
ತಾವಿಬ್ಬರೂ ಕರ್ತವ್ಯ ಮುಗಿಸಿ ಒಟ್ಟಿಗೆ ಹೊರಟಿದ್ದಾಗ ಆತ ನಿಂತಿರುವುದನ್ನು ನೋಡಿದ ಸುಧಾರಾಣಿ ಅವನೊಂದಿಗೆ ಮಾತನಾಡಿ ಬರುವುದಾಗಿ ನಿಂತಳು. ನಾನು ಮುಂದೆ ಹೊಗುವಷ್ಟರಲ್ಲಿ ಚೀರಾಡತೊಡಗಿದಳು. ನಾನು ಬಿಡಿಸಲು ಹೋದಾಗ ಆತ ನನಗೂ ತಲ್ವಾರ್ ತೋರಿಸಿದ ಎಂದು ಗಾಯತ್ರಿ ಹೇಳಿದ್ದಾರೆ.
ಇಬ್ಬರ ನಡುವೆ ಪ್ರಿತಿ, ಮದುವೆ ವಿಷಯ ಮತ್ತು ಹಣಕಾಸು ವ್ಯವಹಾರಗಳು ಕೊಲೆಗೆ ಕಾರಣವೆನ್ನಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ