ನಡು ರಸ್ತೆಯಲ್ಲಿ, ಹಾಡ ಹಗಲೇ ಯುವತಿಯನ್ನು ಹೊತ್ತೊಯ್ದ ಯುವಕರ ಗ್ಯಾಂಗ್

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ರಾಜ್ಯದಲ್ಲಿ ಇಂತದ್ದೊಂದು ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆ. ಅಂಗಡಿಗೆ ಬಂದಿದ್ದ ಯುವತಿಯನ್ನು ಹಾಡ ಹಗಲೇ ಯುವಕರ ಗ್ಯಾಂಗ್ ಕಾರಿನಲ್ಲಿ ಬಂದು ಹೊತ್ತೊಯ್ದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದಲ್ಲಿ ನಡೆದಿದೆ.
ಮಡಿಕೇರಿ ಹೊರವಲಯದ ಅಂಗಡಿಗೆ ಬಂದ ಯುವತಿ ಅಂಗಡಿ ಮಾಲೀಕನಿಗೆ 500 ರೂಪಾಯಿ ಕ್ಯಾಶ್ ನೀಡಿ, ತಕ್ಷಣ ಗೂಗಲ್ ಪೇ ಮಾಡುತ್ತೇನೆ ಎಂದಿದ್ದಾಳೆ. ಅಂಗಡಿ ಮಾಲೀಕ 500 ರೂಪಾಯಿ ಕೊಟ್ಟಿದ್ದು, ಯುವತಿ ಗೂಗಲ್ ಪೇ ಮೂಲಕ ವಾಪಸ್ ಹಣ ಪಾವತಿಸಿದ್ದಾಳೆ. ಅದೇ ಸಮಯದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಯುವಕರ ಗ್ಯಾಂಗ್ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.
ಗ್ರೇ ಬಣ್ಣದ ಇನ್ನೋವಾ ಕಾರಿನಲ್ಲಿ ಮೂವರು ಯುವಕರು ಹಾಗೂ ಓರ್ವ ಯುವತಿಯೂ ಇದ್ದ ಗುಂಪು ಅಂಗಡಿ ಬಳಿ ಬಂದ ಯುವತಿಯನ್ನು ಎಳೆದೊಯ್ದಿದ್ದಾರೆ. ಅದಕ್ಕೆ ಆಕೆ ತಾನು ಬರುವುದಿಲ್ಲ, ಬಿಟ್ಟುಬಿಡಿ ಎಂದು ಕೂಗಿಕೊಂಡಿದ್ದಾಳೆ ಆದರೂ ಕೇಳದ ಯುವಕರ ಗ್ಯಾಂಗ್ ಯುವತಿಯನ್ನು ಕಾರಿನಲ್ಲಿ ಹೊತ್ತೊಯ್ದಿದ್ದಾರೆ.
ನೋಡ ನೋಡುತ್ತಿದ್ದತೆಯೇ ಹಾಡ ಹಗಲೇ ನಡೆದ ಈ ಘಟನೆ ಕಂಡು ಅಂಗಡಿ ಮಾಲೀಕ ಕಂಗಾಲಾಗಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಮಡಿಕೇರಿ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೇಖಾ




