
ಪ್ರಗತಿವಾಹಿನಿ ಸುದ್ದಿ; ಇಂದೋರ್: ಯುವಕನೊಬ್ಬನನ್ನು ಮನಬಂದತೆ ಥಳಿಸಿ, ಆತನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು ಚಿತ್ರಹಿಂಸೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.
ಹಲ್ಲೆಗೊಳಗಾದಾತ 21 ವರ್ಷದ ಬುಡಕಟ್ಟು ಜನಾಂಗದ ಯುವಕ. ಹಲ್ಲೆಗೊಳಗಾದ ಯುವಕ ತನ್ನ ಇಬ್ಬರು ಸಹೋದರಿಯರೊಂದಿಗೆ ನಜೀಮ್ ಖಾನ್ ಎಂಬಾತನ ಮನೆಯಲ್ಲಿ ಬಾಡಿಗೆಗೆ ಇದ್ದ. ಮನೆ ಮಾಲೀಕನ ಮಗನ ಸ್ನೇಹ ಬೆಳೆಸಿ ಆತನಿಂದಲೇ 50,000 ರೂಪಾಯಿ ಪಡೆದು ಲ್ಯಾಪ್ ಟಾಪ್ ಖರೀದಿಸಿದ್ದ. ಹಣ ವಾಪಸ್ ನೀಡದೇ ವಂಚಿಸಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಯುವಕನನ್ನು ಹಿಡಿದ ಮನೆ ಮಾಲೀಕ ಹಾಗೂ ಕೆಲವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಯುವಕನನ್ನು ನಗ್ನಗೊಳಿಸಿ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಜೀಮ್ ಖಾನ್ ಮೇಕೆ ಖರೀದಿಸುವ ನೆಪದಲ್ಲಿ ಬಾಡಿಗೆಗೆ ಇದ್ದ ಯುವಕನನ್ನು ಕರೆದೊಯ್ದು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ. ಈ ಬಗ್ಗೆ ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಗೃಹ ಸಚಿವರ ದಿಢೀರ್ ಭೇಟಿ
ಪ್ರವಾಹ ಭೀತಿ; ರೆಡ್ ಅಲರ್ಟ್ ಘೋಷಣೆ; ಶಾಲಾ-ಕಾಲೇಜುಗಳಿಗೆ ರಜೆ