
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ತಾಲೂಕಿನ ಡೊಣವಾಡ ಗ್ರಾಮದ ನಿವಾಸಿಯಾಗಿದ ಭಾರತಿ ಮಹಾದೇವ ಚಂಡಕೆ ಇವರು ಕೆಲಸದ ನಿಮಿತ್ಯ ನಗರದ ಬಿ. ಕೆ. ಕಂಗ್ರಾಳಿಯಲ್ಲಿ ವಾಸವಾಗಿದ್ದರು. ಇವರ 26 ವರ್ಷ ವಯಸ್ಸಿನ ಮಗ ವಿಜಯ ಮಹಾದೇವ ಚಂಡಕೆ ಯಾರಿಗೂ ಹೇಳದೆ ಮನೆಯಿಂದ ಹೋಗಿ ಕಾಣಿಯಾಗಿದ್ದಾನೆ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯಾದ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಮೈಯಿಂದ ಸದೃಡ, ದುಂಡು ಮುಖ, ಸಾದಾರಣ ಗುಂಡು ಮೂಗು, ಕಪ್ಪು ಕೂದಲು ಹಾಗೂ ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾನೆ. ಕೆಂಪು ಬಣ್ಣದ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣಿಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ನಗರದ ಕಾಕತಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ಅಥವಾ ಕಾಕತಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ : 9480804115, 9480804083 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾಕತಿ ಪೊಲೀಸ್ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.