Kannada NewsKarnataka NewsLatest

ವ್ಯವಸ್ಥೆ ಬದಲಾವಣೆಯಲ್ಲಿ ಯುವಜನತೆ ಸಕ್ರೀಯವಾಗಿ ಪಾಲ್ಗೊಳ್ಳಬೇಕು – ಲಕ್ಷ್ಮಿ ಹೆಬ್ಬಾಳಕರ್  

 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

​ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಖನಗಾಂವ ಕೆ ಎಚ್ ಗ್ರಾಮದಲ್ಲಿ‌ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಇಡೀ ಜೀವನವನ್ನು ರೂಪಿಸುವ ಮಹತ್ವದ ಸಂದರ್ಭವಾಗಿದೆ. ಹಾಗಾಗಿ ಅನಗತ್ಯವಾಗಿ ಸಮಯವನ್ನು ವ್ಯರ್ಥಮಾಡದೆ ವಿದ್ಯಾಭ್ಯಾಸದ ಕಡೆ ಲಕ್ಷ್ಯವಹಿಸಬೇಕು. ಸುಂಸ್ಕೃತ ನಾಗರಿಕರಾಗಿ ಬದುಕಲು ಭದ್ರ ಬುನಾದಿ ಹಾಕಿಕೊಳ್ಳಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದರು.
ಇಂದಿನ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಯುವ ಜನರು ಪ್ರಮುಖ ಪಾತ್ರವಹಿಸಬೇಕು. ನೀವು ಪಾಲ್ಗೊಂಡಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಕೇವಲ ಅಭಿವೃದ್ಧಿಯಲ್ಲಷ್ಟೆ ಅಲ್ಲ, ಜನ ಜಾಗ್ರತಿಯಲ್ಲಿ ಕೂಡ ಮಾದರಿಯಾಗಿಸಬೇಕಿದೆ. ಹಾಗಾಗಿ ನಾವು, ನೀವೆಲ್ಲರೂ ಸೇರಿ ಕ್ಷೇತ್ರವನ್ನು ಆದರ್ಶ ಕ್ಷೇತ್ರವನ್ನಾಗಿಸೋಣ ಎಂದು ಅವರು ಹೇಳಿದರು.
 ಮಹಾತ್ಮ ಜ್ಯೋತಿಬಾ ಫುಲೆ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಮಹಾತ್ಮ ಜ್ಯೋತಿಬಾ ಫುಲೆ ಫೌಂಡೇಷನ್ ನ ಅಧ್ಯಕ್ಷ​ ಜ್ಯೋತಿಬಾ ಪಾಟೀಲ್, ಮಲ್ಲಪ್ಪ ಗಿರಿಯಾಳಕರ್, ಬಾಳು ಗಿರಿಯಾಳಕರ್ ಹಾಗೂ ಫೌಂಡೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button