Latest

ಪಿಯು ಮೊದಲ ಸ್ಥಾನ ಇಬ್ಬರಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಈ ಬಾರಿಯ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ (596) ಹಾಗೂ ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ಶ್ರೀಕೃಷ್ಣ ಶರ್ಮ ಕೆ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದ ಮಂಗಳೂರಿನ ಕೊಡಿಯಾಲ್‌ಬೈಲಿನ ಕೆನರಾ ಕಾಲೇಜಿನ ಶ್ರೀಯಾ ಶೆಣೈ(595) ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಪದ್ಮನಾಭನಗರ ಕುಮಾರನ್ಸ್‌ ಕಾಂಪೊಸಿಟ್ಪಿಯು ಕಾಲೇಜಿನ ರಾಜೇಶ್‌ ಕಶ್ಯಪ್‌(594) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಂತೆಯೇ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಇಂಡಿಪೆಂಡೆಂಟ್ ಕಾಲೇಜಿನ ಕುಸುಮ(594) ಪ್ರಥಮ ಸ್ಥಾನ ಗಳಿಸಿದ್ದಾರೆ.

ಪಿಯುಸಿಯಲ್ಲಿ ಶೇ.61.73 ವಿದ್ಯಾರ್ಥಿಗಳು ಪಾಸ್

Home add -Advt

Related Articles

Back to top button