ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಅಪರೂಪಕ್ಕೊಮ್ಮೆ ಎಂಬಂತೆ ನಡೆಯುವ ಸೃಷ್ಟಿ ವೈಚಿತ್ರ್ಯವೊಂದು ಇಂದು ರಾಜಧಾನಿ ಬೆಂಗಳೂರು ಮತ್ತಿತರೆಡೆ ನಡೆಯಲಿದೆ. ಇದು ಸೌರವ್ಯೂಹದ ವಿಚಿತ್ರ ಆಟವೆಂದೇ ಹೇಳಬೇಕು.
ಇಷ್ಟಕ್ಕೂ ಅದೇನಾಗಲಿದೆ ಎಂಬ ಕುತೂಹಲ ಸಹಜ. ರಣ ಬಿಸಿಲಲ್ಲಿ ನಮ್ಮನ್ನು ಬಿಟ್ಟೂ ಬಿಡದೆ ಹಿಂಬಾಲಿಸುವ ಏಕೈಕ ಮಿತ್ರ ಎಂದೇ ಹೇಳಲಾಗುವ ನಿಮ್ಮದೇ ನೆರಳೂ ನಿಮಗಿಂದು ಕೆಲವು ಕ್ಷಣಗಳವರೆಗೆ ಗೋಚರಿಸುವುದಿಲ್ಲ. ಇದನ್ನು ಶೂನ್ಯ ನೆರಳು (Zero Shadow) ಎಂದೂ ಕರೆಯಲಾಗುತ್ತದೆ.
ಮಧ್ಯಾಹ್ನ 12.15ರ ವೇಳೆ ಇದು ಸಂಭವಿಸಲಿದ್ದು ಈ ವೈಚಿತ್ರ್ಯದ ವಿಶೇಷ ಅನುಭವ ಹೊಂದಲು ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ತಮ್ಮ ಕ್ಯಾಂಪಸ್ ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ವರ್ಷದಲ್ಲಿ ಉತ್ತರಾಯನ ಮತ್ತು ದಕ್ಷಿಣಾಯನದಲ್ಲಿ ತಲಾ ಒಂದು ಬಾರಿಯಂತೆ ಎರಡು ಬಾರಿ ಮಾತ್ರ ಇದು ಸಂಭವಿಸುತ್ತದೆ. 2021ರಲ್ಲಿ ಈ ರೀತಿ ಅನುಭವವನ್ನು ಒಡಿಶಾದ ಭುಬನೇಶ್ವರದ ನಾಗರಿಕರು ಆನಂದಿಸಿದ್ದರು. ಈ ಬಾರಿ ಬೆಂಗಳೂರಿಗರಿಗೆ ಈ ಅವಕಾಶ ಒದಗಿಬಂದಿದೆ. ಒಂದರಿಂದ 1.5 ನಿಮಿಷ ಮಾತ್ರ ಈ ಅನುಭವ ದೊರೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ