Latest

*ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರ ಮರು ವಿಂಗಡಣೆ ಕರಡು ಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಜಿಲ್ಲಾ ಪಮ್ಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರವ್ಯಾಪ್ತಿಯನ್ನು ನಿಗದಿ ಪಡಿಸಿ ವಿಶೇಷ ಗೆಜೆಟ್ ಪ್ರಕಟಿಸಿದೆ.

 ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ.
ಜಿಪಂ, ತಾಪಂ ಸದಸ್ಯರ ಸಂಖ್ಯೆ, ಕ್ಷೇತ್ರಗಳ ಗಡಿ ನಿಗದಿ ಮಾಡಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ನಿಗದಿಗೊಳಿಸಿದ್ದು,  ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಜನವರಿ 16 ಕೊನೆಯ ದಿನವಾಗಿದೆ.
ಆನ್ ಲೈನ್ ಮೂಲಕ ಅಥವಾ ಖುದ್ದಾಗಿ ಅಥವಾ ಅಂಚೆಯ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. https//rdpr.karnataka.gov.in/rdc/public/ ನಲ್ಲಿ ಮುಖಪುಟದ ಎಡ ಭಾಗದಲ್ಲಿರುವ ಸಾರ್ವಜನಿಕರ ಸಲಹೆಗಳು ಎಂಬ ಶೀರ್ಷಿಕೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಇಲ್ಲವೇ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, ಮೂರನೇ ಗೇಟ್, ಎರಡನೇ ಮಹಡಿ, ಕೊಠಡಿ ಸಂಖ್ಯೆ 222/ಎ ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀದಿ, ಬೆಂಗಳೂರು -1 ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.
ಕರಡು ಅಧಿಸೂಚನೆಯ ನಂತರ ಬೆಂಗಳೂರು ನಗರ ಜಿಲ್ಲೆ 28, ಗ್ರಾಮಾಂತರ ಜಿಲ್ಲೆ 25, ಕೋಲಾರ 29, ರಾಮನಗರ 28, ಚಿಕ್ಕಬಳ್ಳಾಪುರ 29, ವಿಜಯನಗರ 28, ಬಳ್ಳಾರಿ 28, ಕೊಪ್ಪಳ 31, ರಾಯಚೂರು 38, ಬೀದರ್ 35, ಯಾದಗಿರಿ 28, ಹಾವೇರಿ 34, ವಿಜಯಪುರ 44, ಭಾಗಲಕೋಟೆ 35, ಉತ್ತರ ಕನ್ನಡ 54, ಕಲಬುರ್ಗಿ 48, ಗದಗ 25, ಧಾರವಾಡ 28, ಬೆಳಗಾವಿ 91, ಉಡುಪಿ 28, ದಕ್ಷಿಣ ಕನ್ನಡ 35, ಕೊಡಗು 25, ಚಾಮರಾಜನಗರ 28, ಚಿಕ್ಕಮಗಳೂರು 36, ಹಾಸನ 39, ಮಂಡ್ಯ 40, ಮೈಸೂರು 46, ಶಿವಮೊಗ್ಗ 31, ಚಿತ್ರದುರ್ಗ 37, ತುಮಕೂರು 57, ರಾಮನಗರ 28, ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಇದೆ.
ಇಲ್ಲಿ ಕ್ಲಿಕ್ ಮಾಡಿ – 5103 (1)

5104 (1)

ಸ್ಮಾರಕ ಬೇಡ…. ಚಿತಾ ಭಸ್ಮವನ್ನು ನದಿಯಲ್ಲಿ ವಿಸರ್ಜಿಸಿ… ಮಂಗಳವಾರ ಸಂಜೆ ಅಂತ್ಯಕ್ರಿಯೆ

https://pragati.taskdun.com/no-memorial-dissolve-cremation-in-river-funeral-tuesday-evening/

Home add -Advt

Related Articles

Back to top button