Latest

ಆಟೋ ಪೈಲೆಟ್ ಮೋಡ್ ಗೆ ಹಾಕಿ ವಿಮಾನದಲ್ಲಿ ಬಾಲಕಿಯೊಂದಿಗೆ ಸೆಕ್ಸ್ ನಡೆಸಿದ್ದ ಉದ್ಯಮಿಗೆ ಶಿಕ್ಷೆ

ನ್ಯೂಜೆರ್ಸಿ:

ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಸಲುವಾಗಿ ವಿಮಾನವನ್ನು ಆಟೋ ಪೈಲಟ್ ಮೋಡ್‌ಗೆ ಹಾಕಿದ 53 ವರ್ಷದ ಉದ್ಯಮಿಗೆ  ಈಗ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯೂ ಜೆರ್ಸಿಯ  ಕೋಟ್ಯಾಧಿಪತಿ ಸ್ಟೀಫನ್ ಬ್ರಾಡ್ಲಿ ಮೆಲ್ ಶಿಕ್ಷೆಗೆ ಒಳಗಾದವರು. ಇದೀಗ ವಿಮಾನವನ್ನು ಆಟೋ ಮೋಡ್ ಗೆ ಹಾಕಿದ್ದ ಆರೋಪಕ್ಕಷ್ಟೆ ಶಿಕ್ಷೆಯಾಗಿದ್ದು, ಅಪ್ರಾಪ್ತ ಬಾಲಕಿಯೊಂದಿಗಿನ ಸೆಕ್ಸ್ ಗೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ಮುಂದುವರಿದಿದೆ. 

2018ರ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕಿಗೆ ವಿಮಾನ ಚಾಲನೆ ತರಬೇತಿ ನೀಡುವ ಸಂದರ್ಭದಲ್ಲಿ ಆತ ತನ್ನ ಖಾಸಗಿ  ವಿಮಾನವನ್ನು ಆಟೋ ಪೈಲಟ್ ಮೋಡ್‌ಗೆ ಹಾಕಿ ಬಾಲಕಿಯೊಂದಿಗೆ ಸೆಕ್ಸ್ ನಡೆಸಿದ್ದ. 2018ರ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿತ್ತು.

Home add -Advt

ಇದೀಗ ತೀರ್ಪು ನೀಡಿರುವ ನ್ಯಾಯಾಲಯ ಉದ್ಯಮಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಖಾಸಗಿ ವಿಮಾನ ಇಟ್ಟುಕೊಂಡಿದ್ದ ಮೂರು ಮಕ್ಕಳ ತಂದೆ ಮೆಲ್ ಶ್ರೀಮಂತ ಉದ್ಯಮಿ. ಈತನ ಬಳಿ  ಬಾಲಕಿಯ ತಾಯಿ ಮಗಳಿಗೆ ವಿಮಾನ ಹಾರಾಟ ನಡೆಸುವ ತರಬೇತಿ ನೀಡಲು ಮನವಿ ಮಾಡಿಕೊಂಡಿದ್ದರು. 

 

Related Articles

Back to top button