Latest

ಇಂಡೋನೇಷ್ಯಾ: ಸುನಾಮಿಯಿಂದ ಮೃತಪಟ್ಟವರ ಸಂಖ್ಯೆ 225ಕ್ಕೆ ಏರಿಕೆ

 

 

     ಪ್ರಗತಿವಾಹಿನಿ ಸುದ್ದಿ 

Home add -Advt

ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ದ್ವೀಪಗಳಲ್ಲಿ ಯಾವುದೇ ಮುನ್ದಸೂಚನೆ ಇಲ್ಲದೆ ಉಂಟಾಗಿರುವ ಸುನಾಮಿಯಿಂದ 225ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಸಮುದ್ರದಾಳದಲ್ಲಿ ಭೂಕುಸಿತ ಉಂಟಾಗಿದ್ದಲ್ಲದೆ, ಹುಣ್ಣಿಮೆಯ ಅವಧಿಯಲ್ಲಿನ ಅಲೆಗಳ ಉಬ್ಬರ ಸಹ ಹೆಚ್ಚಾಗಿದೆ. ಇದೇ ಸುನಾಮಿಗೆ ಕಾರಣ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಇದೇ ವೇಳೆ ಉಂಟಾಗಿರುವ ಭೂಕಂಪದಿಂದ ಸಾವಿರಾರು ಮನೆಗಳು ನೆಲಸಮವಾಗಿವೆ. ಸಾವಿರಾರು ವಾಹನಗಳು ಕೂಡ ಜಖಂಗೊಂಡಿವೆ. ನಾಪತ್ತೆಯಾದವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. 

 

Related Articles

Back to top button