Latest

ಒಂದೇ ಕ್ಷೇತ್ರಕ್ಕೆ 3 ಹಂತದ ಚುನಾವಣೆ: ಇದು ಸಾರ್ವಕಾಲಿಕ ದಾಖಲೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಭಾರೀ ಬಂದೋಬಸ್ತ್ ನಡುವೆ ಮತದಾನ ನಡೆಸಲು ಮುಂದಾಗಿದೆ. 

ಪುಲ್ವಾಮಾ ಜಿಲ್ಲೆಯನ್ನು ಒಳಗೊಡಿರುವ ಅನಂತನಾಗ್ ಕ್ಷೇತ್ರದಲ್ಲಿ 3 ಹಂತದಲ್ಲಿ ಮತದಾನ ನಡೆಯಲಿದ್ದು, ಇದೊಂದು ಅಪರೂಪದಲ್ಲಿ ಅಪರೂಪದ ವಿದ್ಯಮಾನವಾಗಿದೆ.

ಜಮ್ಮು ಕಾಶ್ಮೀರದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ನಡೆಯಬೇಕಿದ್ದ ವಿಧಾನಸಭೆ ಚುನಾವಣೆಯನ್ನು ಮುಂದೂಡಲಾಗಿದೆ.

Home add -Advt

ಜಮ್ಮು ಕಾಶ್ಮೀರದಲ್ಲಿ ಒಟ್ಟೂ ಆರು ಲೋಕಸಭಾ ಕ್ಷೇತ್ರಗಳಿವೆ.  ಅನಂತ್ ನಾಗ್, ಬಾರಾಮುಲ್ಲಾ, ಶ್ರೀನಗರ, ಜಮ್ಮು, ಲಡಾಖ್ ಮತ್ತು ಉಧಂಪುರ. ಈ 6 ಲೋಕಸಭಾ ಕ್ಷೇತ್ರಗಳಿಗೆ ಒಟ್ಟೂ 5 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ಸದಾ ಉಗ್ರರ ಉಪಟಳದಿಂದ ಕುಖ್ಯಾತಿ ಪಡೆದಿರುವ ಅನಂತ್ ನಾಗ್ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. 
ಅನಂತ್ ನಾಗ್ ಕ್ಷೇತ್ರದಲ್ಲಿ ಹದಿನಾರು ವಿಧಾನಸಭೆ ಕ್ಷೇತ್ರಗಳಿವೆ. ಅವುಗಳಲ್ಲಿ, ಪುಲ್ವಾಮಾ, ಶೋಫಿಯಾನ್, ಅನಂತ್ ನಾಗ್, ದೇವ್ಸರ್, ಕುಲ್ ಗಾಂ ಮತ್ತು ಪಹಲಗಾಂ ಕೂಡಾ ಸೇರಿವೆ. 1967 ರಿಂದ 2014ರ ವರೆಗೆ ನಡೆದ ಹನ್ನೆರಡು ಲೋಕಸಭಾ ಚುನಾವಣೆಯಲ್ಲಿ ಜೆಕೆಎನ್ಸಿ ಐದು ಬಾರಿ, ಕಾಂಗ್ರೆಸ್ ನಾಲ್ಕು ಬಾರಿ, ಮೆಹಬೂಬಾ ಮುಫ್ತಿಯ ಪಕ್ಷ ಎರಡು ಬಾರಿ ಮತ್ತು ಜನತಾದಳ ಒಂದು ಬಾರಿ ಗೆದ್ದಿತ್ತು.

ಅನಂತ್ ನಾಗ್ ಕ್ಷೇತ್ರದ ಲೋಕಸಭಾ ಚುನಾವಣೆ ಏಪ್ರಿಲ್ 23, 29 ಮತ್ತು ಮೇ 6ರಂದು ನಡೆಯಲಿದೆ. ಇದರಲ್ಲಿ ಅನಂತ್ ನಾಗ್ ಅಸೆಂಬ್ಲಿ ಕ್ಷೇತ್ರ 23ಕ್ಕೆ, ಕುಲ್ ಗಾಂ ಕ್ಷೇತ್ರ 29ಕ್ಕೆ ಮತ್ತು ಪುಲ್ವಾಮಾ, ಶೋಫಿಯಾನ್ ಕ್ಷೇತ್ರದ ಚುನಾವಣೆ ಮೇ 6ರಂದು ನಡೆಯಲಿದೆ. ಇವೆಲ್ಲವೂ ಉಗ್ರರ ಉಪಟಳದಿಂದ ಕೂಡಿರುವ ಅಸೆಂಬ್ಲಿ ಕ್ಷೇತ್ರಗಳು.

 

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಶೇರ್ ಮಾಡಿ)

Related Articles

Back to top button