Latest

ಕಾಂಗ್ರೆಸ್ ಮಾಡಿಕೊಂಡ ಒಪ್ಪಂದಗಳು ದಲ್ಲಾಳಿಗಳಿಲ್ಲದೆ ಆಗಿರಲೇ ಇಲ್ಲ, ದಲ್ಲಾಳಿಗಳೆಲ್ಲ ಅವರ ಕುಟುಂಬದಲ್ಲೇ ಇದ್ದರು -ಮೋದಿ

ಕಾಂಗ್ರೆಸ್ ಆಳಿದ್ದು, 55 ವರ್ಷ, ನಾನು ಆಳಿದ್ದು 55 ತಿಂಗಳು

ಪ್ರಗತಿವಾಹಿನಿ ಸುದ್ದಿ, ನವದೆಹಲಿ

55 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪ್ರತಿಭಾರಿ ಚುನಾವಣೆ ವೇಳೆ ಆಶ್ವಾಸನೆ ನೀಡುತ್ತಿದೆಯೇ ಹೊರತು ಯಾವುದನ್ನೂ ಜಾರಿಗೊಳಿಸಿಲ್ಲ. ಹಾಗೆ ಮಾಡಿದ್ದರೆ ನಾನು 55 ತಿಂಗಳಲ್ಲಿ ಇಷ್ಟೊಂದು ಕೆಲಸ ಮಾಡುವ ಅವಕಾಶ ಮತ್ತು ಅವಶ್ಯಕತೆ ಇರುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಗುರುವಾರ ಸುಧೀರ್ಘ ಭಾಷಣ ಮಾಡಿದ ಮೋದಿ, ಪ್ರತಿ ಹಳ್ಳಿಗೆ ವಿದ್ಯುತ್ ನೀಡುವುದಾಗಿ, ಬಡತನ ನಿರ್ಮೂಲನ ಮಾಡುವುದಾಗಿ ಹೇಳುತ್ತಲೇ ಬಂದರು. ಆದರೆ ಯಾವುದು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳಬೇಕು. ಕಾಂಗ್ರೆಸ್ ಮಾಡಿಕೊಂಡ ಒಪ್ಪಂದಗಳು ದಲ್ಲಾಳಿಗಳಿಲ್ಲದೆ ಆಗಿರಲೇ ಇಲ್ಲ. ದಲ್ಲಾಳಿಗಳೆಲ್ಲ ಅವರ ಕುಟುಂಬದಲ್ಲೇ ಇದ್ದರು ಎಂದು ಹರಿಹಾಯ್ದರು.

ನಿಜವಾಗಿ ಪ್ರಜಾಪ್ರಭುತ್ವವನ್ನು ಗೌರವಿಸುವವರೆಲ್ಲ ಮಹಾಘಟಬಂಧನ್ ದಿಂದ ದೂರವೇ ಉಳಿದರು. ಇದೊಂದು ಮಹಾಕಲಬೆರಕೆ ಘಟಬಂಧನ್ ಎಂದು ಮೋದಿ ವ್ಯಂಗ್ಯವಾಡಿದರು. ಪ್ರಾಮಾಣಿಕವಾಗಿ ಸೈನ್ಯವನ್ನು ಬಲಪಡಿಸಲು ಮುಂದಾದರೆ ಅದಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಸೇನಾಪಡೆ ಮುಖ್ಯಸ್ಥನನ್ನು ಅವಮಾನಿಸಿದರು. ಪ್ರಜಾತಂತ್ರಕ್ಕೆ ಅವಮಾನ ಮಾಡಿದರು. ಈ ದೇಶದ ಜನರಿಗೆ ಅವಮಾನ ಮಾಡಿದರು. ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಕಾಂಗ್ರೆಸ್ ನವರಿಗೆ ಅಧಿಕಾರದ ನಶೆ ಇಳಿದಿದೆ. ಏನು ಮಾಡಬೇಕೆನ್ನುವುದೇ ತಿಳಿಯುತ್ತಿಲ್ಲ ಎಂದರು ಮೋದಿ. 

(ನರೇಂದ್ರ ಮೋದಿ ಭಾಷಣ ಇನ್ನೂ ಮುಂದುವರಿಯುತ್ತಿದೆ)

(ಪ್ರಗತಿವಾಹಿನಿ ಸುದ್ದಿಗಳನ್ನು ಶೇರ್ ಮಾಡಿ)

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button