Latest

ಕಿಣಯೇ: ಉಚಿತ ಗ್ಯಾಸ್ ಒಲೆ, ಸಿಲಿಂಡರ್ ವಿತರಣೆ

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಿಣಯೇ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ ಹಾಗೂ ಸಿಲಿಂಡರ್ ವಿತರಿಸಲಾಯಿತು.

ಮಾಜಿ ಶಾಸಕ ಸಂಜಯ ಪಾಟೀಲ ಫಲಾನುಭವಿಗಳಿಗೆ ಗ್ಯಾಸ್ ಒಲೆ ಹಾಗೂ ಸಿಲಿಂಡರ್ ವಿತರಿಸಿ, ಬಿಪಿಎಲ್ ಕಾರ್ಡ್ ಹೊಂದಿದ ಗ್ಯಾಸ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ 6.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಪ್ರಸಕ್ತ ಬಜೆಟ್ ನಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಯವರನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿ ಇನ್ನೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸಲು ಕಾರ್ಯಪ್ರವತ್ತರಾಗಬೇಕೆಂದು ಕರೆನೀಡಿದರು.

ಮೋಹನ ಅಂಗಡಿ, ಕಲ್ಲಪ್ಪಾ ಸಂಪಗಾಂವಿ, ಅಪ್ಪಾಸಾಹೇಬ ಕೀರ್ತನೆ, ವಿನಯ ಕದಮ, ಹೇಮಂತ ಪಾಟೀಲ, ಮಾಯಾ ಗುರವ, ಪ್ರಭಾಕರ ಢುಕರೆ, ನಾಮದೇವ ಢುಕರೆ, ವಿಠ್ಠಲ ನಾನಾ ಪಾಟೀಲ, ರಾಮಲಿಂಗ ಗುರವ, ಸಂಭಾಜಿ ಗುರವ, ಪ್ರಲ್ಹಾದ ಪಾಟೀಲ, ಅಶೋಕ ಲೋಹಾರ, ಮಾರುತಿ ಡುಕರೆ, ರಮೇಶ ಲೋಹಾರ, ನೇಮಾಣಿ ಢುಕರೆ, ಅಜೀತ ಢುಕರೆ, ಹಣುಮಂತ ಕಾಮಕರ, ಮಹಿಳಾ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button