ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್‌ಇ ಸಂಸ್ಥೆಯ ಬಿಬಿಎ ಲಿಂಗರಾಜ ಕಾಲೇಜಿನಲ್ಲಿ ಎರಡು ದಿನಗಳ ವ್ಯವಸ್ಥಾಪನ ಉತ್ಸವ ಸ್ಪೆಕ್ಟ್ರಂ – 2019 ಆಯೋಜಿಸಲಾಗಿದೆ.
ಪಿಎಸ್‌ಪಿಎಲ್‌ನ ಸಹ-ಸಂಸ್ಥಾಪಕ ಹಾಗು ಮುಖ್ಯ ಕಾರ್ಯನಿರ್ವಾಹಕ ಅಮಿತ್ ಕಲಕುಂದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾತನಾಡಿ, ದಿನದಿಂದ ದಿನಕ್ಕೆ ತಂತ್ರಜ್ಞಾನವು ಬದಲಾಗುತ್ತಿದೆ, ಇಂದಿನ ತಂತ್ರಜ್ಞಾನವು ನಾಳೆಗೆ ಅನುಪಯುಕ್ತವಾಗುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಸಿದರು.
ಪ್ರಾಚಾರ್ಯ ಡಾ. ಪಿ. ಆರ್. ಕಡಕೋಳ ಸ್ವಾಗತಿಸಿದರು. ವೇದಿಕೆಯ ಮೇಲೆ ಪ್ರೊ. ವಿಭಾ ಹೆಗಡೆ, ಕಾಲೇಜಿನ ವಿಧ್ಯಾರ್ಥಿ ಪ್ರತಿನಿಧಿ ರುಚಿ ಪೋರವಾಲ ಹಾಗು ಉತ್ಸವ ಸಂಯೋಜಕ ನಮನ್ ಜೈನ್ ಉಪಸ್ಥಿತರಿದ್ದರು. ಪ್ರಥ್ವಿ ಬಾಳೆಕುಂದ್ರಿ ಹಾಗು ಶೃತಿ ಹಂಗಿರಗೆಕರ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ವಾಗತ ಗೀತೆಯನ್ನು ರೋಹಿಣಿ ಹಂಗಿರಗೆಕರ ಅವರು ಹಾಡಿದರು. ನೋಮನ್ ಸಯ್ಯದ್ ವಂದಿಸಿದರು.