LatestPolitics

ಚಿಕ್ಕೋಡಿ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮ-2019

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಇಲ್ಲಿಯ ಕೆಎಲ್ಇ ಎಂಜಿನಿಯರಿಂಗ ಕಾಲೇಜಿನಲ್ಲಿ 11ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮ-2019 2 ದಿನಗಳ ಕಾಲ ನಡೆಯಿತು.


 ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಏಕಸ್ ಎಂಡಿ ರಾಜೀವ ಕೌಲ, ಕೂತುಹಲ ನಿಮ್ಮನ್ನು ಬೆಳೆಸುತ್ತದೆ. ಯಾವುದೇ ವಿಷಯದಲ್ಲಿನ ಅನುಮಾನವನ್ನು ನಿರಾಕರಿಸದೇ, ನಿಮ್ಮ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಅವುಗಳನ್ನು ಪರಿಹರಿಸಿಕೊಳ್ಳಬೇಕೆಂದರು. ಇಂದು ಮಾಹಿತಿ ವಿಪುಲವಾಗಿ ದೊರೆಯುತ್ತದೆ. ಆದರೆ ಸರಿಯಾದ ಮಾಹಿತಿಯನ್ನು ಓದುವುದು ಹಾಗೂ ಸರಿಯಾದುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕಾಲಕಾಲಕ್ಕೆ ಅಪ್ ಡೇಟ್ ಆಗದ ಕಾರಣ ಕೊಡ್ಯಾಕ್ ನಂತಹ ಹೆಸರಾಂತ ಕಂಪನಿಗಳು ಇಂದು ಮುಚ್ಚಿಹೋಗಿವೆ ಎಂದರು.


ಕಾರ್ಯಕ್ರಮದ  ಅತಿಥಿ ಬೆಳಗಾವಿ ಫೆರೋಕಾಸ್ಟ್ ಎಂಡಿ ಸಚಿನ ಸಬ್ನೀಸ್,  ಮಹಾವಿದ್ಯಾಲಯವು ಅತ್ಯಂತ ಒಳ್ಳೆಯ ಕ್ಯಾಂಪಸ್ ಹೊಂದಿದ್ದು, ಸಿಟಿಯಿಂದ ದೂರವಿದ್ದ ಕಾರಣ ಇಲ್ಲಿನ ಪರಿಸರ ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ ಎಂದರು. ಕೇವಲ ಹಣದ ಬೆನ್ನತ್ತಿದರೆ ಹಣ ಸಿಗುವುದಿಲ್ಲ. ಹಣ ಯಾವ ಪ್ರಕ್ರಿಯೆಯ ಪರಿಣಾಮವೋ ಆ ಪ್ರಕ್ರಿಯೆಯತ್ತ ಮುಂದುವರೆಯಿರಿ. ಇಂದಿನ ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆ ಕಂಡುಬರುತ್ತಿದೆ. ಆದ್ದರಿಂದ ತಾವು ತಮ್ಮ ಕಲಿಕಾ ಅವಧಿಯಲ್ಲಿ ಅದರತ್ತ ಗಮನ ಹರಿಸಿ ಎಂದರು.

೨೫ ವರ್ಷಗಳ ಹಿಂದೆ ನಮಗೆ ಇಂಟರನೆಟ್ ಸೌಲಭ್ಯವಿರಲಿಲ್ಲ. ಇಂದು ತಮಗೆ ಜ್ಞಾನವನ್ನು ಪಡೆದುಕೊಳ್ಳಲು ಹಲವಾರು ಮಾರ್ಗಗಳಿದ್ದು, ಅದರ ಸದುಪಯೋಗಪಡಿಸಿಕೊಳ್ಳಲು ಸೂಚಿಸಿದರು. ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಅವಕಾಶಗಳ ಸದ್ಬಳಕೆ ಅತೀ ಮುಖ್ಯ ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ  ಎಸ್ ಸಿ ಮೆಟಗುಡ್ಡ ಮಾತನಾಡಿ, ಕೆ.ಎಲ್.ಇ. ಸಂಸ್ಥೆ ಯಾವತ್ತು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ನಾವು ಈ ಮಹಾವಿದ್ಯಾಲಯದಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ.   ನೌಕರಿಯ ಬೆನ್ನತ್ತದೇ, ತಾವೇ ನೌಕರಿ ಕೊಡುವಂತಾಗಬೇಕೆಂದರು. 
ಕಾಲೇಜಿನ ಪ್ರಾಚಾರ್ಯ  ಡಾ. ಪ್ರಸಾದ ರಾಂಪೂರೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಪತ್ರಿಕೆ ಪಯಣ-೨೦೧೯ ನ್ನು ಬಿಡುಗಡೆಗೊಳಿಸಲಾಯಿತು. ಸಂಯೋಜಕರಾದ ಪ್ರೊ. ವಿರಭದ್ರ ಬೂದ್ಯಾಳ ೨೦೧೮-೧೯ನೇ ಸಾಲಿನ ವಾರ್ಷಿಕ ವರದಿ ವಾಚನ ಮಾಡಿದರು. ಕು. ವಾನಿಶ್ರೀ ಹಾಗೂ ಪೂಜಶ್ರೀ ಸ್ವಾಗತಗೀತೆ ಹಾಡಿದರು. ವಿಶ್ವೇಶ್ವರಯ್ಯಾ ಹಿರೇಮಠ ಅಥಿತಿಯನ್ನು ಪರಿಚಯಿಸಿದರು. ಶೃತಿ ಲಡಗೆ ವಂದಿಸಿದರು. ಅಶ್ವಿನಿ ತಳವಾರ ಮತ್ತು ಶಿಲ್ಪಾ ವಾರದ ನಿರೂಪಿಸಿದರು.
ವಿಭಾಗ ಮುಖ್ಯಸ್ಥರಾದ ಪ್ರೊ. ಸತೀಶ್ ಭೋಜನ್ನವರ, ಪ್ರೊ. ಪ್ರೊ. ವಿ.ಕೆ.ಪಾಟೀಲ, ಪ್ರೊ. ವಿವೇಕ ಪಾಟೀಲ, ಡಾ. ಸಿದ್ದೇಶ ಎಮ್. ಬಿ., ಪ್ರೊ. ಸಚಿನ ಮೆಕ್ಕಳಕಿ ಉಪಸ್ಥಿತರಿದ್ದರು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button