Latest

ಜಿಐಟಿ ಯಲ್ಲಿ ತಾಂತ್ರಿಕ ಮೇಳ “ಟೆಕ್ನೋ ಸ್ಪಾರ್ಕ್” ಸಂಪನ್ನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಅಭಿಯಾಂತ್ರಿಕ ವಿಭಾಗ ಎರಡು ದಿನಗಳ ತಾಂತ್ರಿಕ ಮೇಳ ಟೆಕ್ನೋ ಸ್ಪಾರ್ಕ್ -೨೦೧೯ ನಡೆಯಿತು.

Home add -Advt

ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಪುಣೆಯ ವಿಭಾಗದ ಸೀನಿಯರ್ ಮ್ಯಾನೇಜರ್ ಹೇಮಾವತಿ ಕೋರಾಳಿ  ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ಮಾಹಿತಿ ನೀಡಿದರು. 

ಎರಡು ದಿನ ನಡೆದ ಈ ಮೇಳದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಮೇಲೆ ವಸ್ತು/ವಿಕಲ್ಪಗಳ ಪ್ರದರ್ಶನ, ತಾಂತ್ರಿಕ ಚರ್ಚಾ ಕೂಟಗಳು, ಡಿಸೈನ್ ಥಿಂಕಿಂಗ್ ಸ್ಪರ್ಧೆ, ಮೊಬೈಲ್ ಆಪ್ ಡೆವಲಪ್ಮೆಂಟ್, ಅಲೋಗೋರಿದಮ್ ಡಿಸೈನ್ ಹೀಗೆ ಹಲವು ಸ್ಪರ್ಧೆಗಳಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಭಾಗದ ಮುಖ್ಯಸ್ಥ ಡಾ. ಹರೀಶ್ ಎಚ್. ಕೆಂಚೆನ್ನವರ ಸ್ವಾಗತ ಭಾಷಣ ಮಾಡಿದರು. ಮೇಳದ ಸಂಯೋಜಕ ಪ್ರೊ. ಎಸ್. ಬಿ. ದೇಶಪಾಂಡೆ ಹಾಗೂ ಪ್ರೊ. ಎಸ್. ಡಿ. ಪೇರೂರು, ಸಿಬ್ಬಂದಿ ವರ್ಗ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಸಮಯದಲ್ಲಿ ಹಾಜರಿದ್ದರು.

Related Articles

Back to top button