Latest

ಜಿಐಟಿಯ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ

 

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ವಿವೇಕ್ ವಿ. ಕುಲಕರ್ಣಿ ಹಾಗೂ ಸಂಜೀವ್ ಎಚ್. ಕುಲಕರ್ಣಿ ಇವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್ ಡಿ ಪದವಿ ಪ್ರದಾನ ಮಾಡಿದೆ.

ವಿವೇಕ್ ವಿ ಕುಲಕರ್ಣಿ ಅವರುಪರ್ಫಾರ್ಮೆನ್ಸ್  ಎವಲ್ಯೂಷನ್  ಆಫ್ ಗ್ಯಾಸ್  ಎಂಜಿನ್  ಓಪ್ಟಿಮೈಜ್ಡ್  ಟು  ಪ್ರೊಡ್ಯೂಸರ್  ಗ್ಯಾಸ್ಎಂಬ ವಿಷಯದ ಮೇಲೆ  ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.

ಸಂಜೀವ ಎಚ್. ಕುಲಕರ್ಣಿ ಅವರು ರಿನ್ಯೂವೇಬಲ್  ಎನರ್ಜಿ  ಟೆಕ್ನಾಲಜೀಸ್ : ಪಾಲಿಸಿಸ್, ಬ್ಯಾರಿಯರ್ಸ, ಪ್ರಾಸ್ಪೆಕ್ಟ್ಸ್ ಅಂಡ್  ಚಾಲೆಂಜೆಸ್  ಫಾರ್  ಡಿಸೆಂಟ್ರಲೈಜ್ಡ್  ರಿನ್ಯೂವೇಬಲ್  ಎನರ್ಜಿ ಜನರೇಶನ್  ಸಿಸ್ಟಮ್ಸ್  ಫಾರ್  ರೂರಲ್  ಎಲೆಕ್ಟ್ರಿಫಿಕೇಷನ್ಎಂಬ ವಿಷಯದ ಮೇಲೆ  ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಇವರಿಬ್ಬರಿಗೂ ಕೆ ಎಲ್ ಎಸ್ ಜಿಟಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಆರ್. ಅನಿಲ ಅವರು ಮಾರ್ಗದರ್ಶನ ಮಾಡಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button