ಬೆಂಗಳೂರು:
ಶಾಸಕ ಆನದ ಸಿಂಗ್ ಮೇಲೆ ಈಗಲ್ಟನ್ ರೆಸಾರ್ಟ್ ನಲ್ಲಿ ಹಲ್ಲೆ ನಡೆಸಿದ್ದ ಶಾಸಕ ಗಣೇಶ ಈವರೆಗೂ ಪೊಲೀಸರಿಗೆ ಸಿಕ್ಕಿಲ್ಲ.
ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಮಧ್ಯೆ ಮಾರಾಮಾರಿ: ಆನಂದ ಸಿಂಗ್ ಆಸ್ಪತ್ರೆಗೆ ದಾಖಲು
ಘಟನೆ ನಡೆದು ಒಂದು ತಿಂಗಳಾಗಿದ್ದು, ಗಣೇಶ್ ಬಂಧನಕ್ಕೆ ಪೊಲೀಸರು ಎಲ್ಲೆಡೆ ಶೋಧ ನಡೆಸಿದ್ದಾರೆ. ಹಲ್ಲೆ ನಡೆದ ಮರುದಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರಂಭದಲ್ಲಿ ವಿವಾದ ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನ ನಡೆಸಿದ್ದ ಕಾಂಗ್ರೆಸ್ ಅಂತಿಮವಾಗಿ ಗಣೇಶ್ ನನ್ನು ಪಕ್ಷದಿಂದ ಉಚ್ಚಾಟಿಸಿತ್ತು.
ಅವರು ತಪ್ಪಿಸದಿದ್ದರೆ ನನ್ನ ಕೊಲೆಯಾಗುತ್ತಿತ್ತು -ಶಾಸಕ ಗಣೇಶ್ ವಿರುದ್ಧ ಆನಂದ ಸಿಂಗ್ ದೂರು
ಪ್ರಕರಣ ದಾಖಲಾದ ಕೂಡಲೆ ಗಣೇಶ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇನ್ನೂ ವಿಚಾರಣೆ ಪೂರ್ಣಗೊಳಿಸಿಲ್ಲ. ನಿರೀಕ್ಷಣಾ ಜಾಮೀನಿಗೆ ಆಕ್ಷೇಪ ಸಲ್ಲಿಸಲು ಸರಕಾರಕ್ಕೆ ಫೆ.25ರ ವರೆಗೆ ಅವಕಾಶ ನೀಡಿದೆ.
ಸ್ವಪಕ್ಷೀಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿರುವ ಶಾಸಕ ಆನಂದ ಸಿಂಗ್ ಫೋಟೋ ಬಹಿರಂಗ
ಈ ಮಧ್ಯೆ ಗಣೇಶ ಅಜ್ಞಾತ ಸ್ಥಳದಿಂದಲೇ ಘಟನೆ ಕುರಿತು ಸ್ಪಷ್ಟನೆ ನೀಡಿ, ತಮ್ಮದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಫೇಸ್ ಬುಕ್ ನಲ್ಲಿ ಅವರು ಪತ್ರ ಪ್ರಕಟಿಸಿದ್ದರು.
ಆನಂದ ಸಿಂಗ್ ನನ್ನ ಮೇಲೆ ಮೊದಲು ಕೈ ಎತ್ತಿದ್ದಕ್ಕೆ ನಾನು ಅವರ ಮೇಲೆ ಕೈ ಎತ್ತಿದೆ -ಗಣೇಶ್