ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ರೈತರಿಬ್ಬರು ಸಚಿವ ಆರ್.ವಿ.ದೇಶಪಾಂಡೆ ಕಾಲಿಗೆ ಎರಗಿದರು.
ಬೈಲಹೊಂಗಲ ತಾಲೂಕಿನ ಮೇಕಲರಡಿಯಲ್ಲಿ ಬರ ಅಧ್ಯಯನ ನಡೆಸಲುಆಗಮಿಸಿದ ಆರದ.ವಿ.ದೇಶಪಾಂಡೆ ಅವರು ರೈತರ ಜಮೀನಿಗೆ ಆಗಮಿಸಿದ ವೇಳೆ ರೈತರು ಕಾಲಿಗೆ ಎರಗಿ ನೀರಾವರಿ ಮಾಡುವಂತೆ ಮನವಿ ಮಾಡಿದರು.
ಮಾರ್ಕಂಡೇಯ ಜಲಾಶಯದಿಂದ ಸಮೀಪದ 25 ಕಿ.ಮೀ ಅಂತರದವರೆಗೆ ಕಾಲುವೆ ನಿರ್ಮಾಣ ಮಾಡಲಾಗಿದೆ. ಅದೇ ಕಾಲುವೆಯನ್ನು ಬೈಲಹೊಂಗಲ ತಾಲೂಕಿನ ಮೇಕಲಮರಡಿ ಸೇರಿದಂತೆ ಸುತ್ತಮುತ್ತಲಿನ ಫಲವತ್ತಾದ ಭೂಮಿಗೆ ನೀರಾವರಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ನೀರಾವರಿ ಮಾಡುವ ಭರವಸೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ರೈತರು, ಬಹಳಷ್ಟು ಜನಪ್ರತಿನಿಧಿಗಳು ಭೇಟಿ ನೀಡಿದಾಗ ಭರವಸೆ ನೀಡುತ್ತಾರೆ. ಆದರೆ, ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ನಿವಾದರೂ ಸಮಸ್ಯೆಗೆ ಸ್ಪಂದಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2016 ರಲ್ಲಿ ಫಸಲ ಬಿಮಾ ಯೋಜನೆ ವಿಮೆ ಹಣ ಇನ್ನೂ ಬಂದಿಲ್ಲ ಎಂದು ರೈತರು ಸಚೊವ ದೇಶಪಾಂಡೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಶ್ರೀರಾಮ ವಿಮೆ ಕಂಪನಿಯವರು ತಾಂತ್ರಿಕ ತೊಂದರೆಯಿಂದ ಈ ಭಾಗಕ್ಕೆ ವಿತರಣೆ ಮಾಡಬೇಕಾಗಿದ್ದ ಎಂಟು ಕೋಟಿ ರೂ. ವಿತರಿಸಿಲ್ಲ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ವಿಮೆ ಕಂಪನಿಗಳ ನಿರ್ಧಾರದಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿಗೆ ಸೂಚನೆ ನೀಡಿದರು.
ಮೇವು ಸಮಸ್ಯೆ ನಿಗಿಸುವಂತೆ ರೈತರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಒಂದೆರೆಡು ಕಡೆಯಾದರೂ ಮೇವು ಬ್ಯಾಂಕ್ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಂಸದ ಸುರೇಶ ಅಂಗಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ