ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ತಮ್ಮ ಪಕ್ಷದ ಸಾಧನೆ ಮತ್ತು ಮೋದಿ ಸರಕಾರದ ವೈಫಲ್ಯತೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ತನ್ನದೇ ಆದ ಹೊಸ ಪಾಕ್ಷಿಕ ಪತ್ರಿಕೆಯೊಂದನ್ನು ಹೊರತರಲು ಉದ್ದೇಶಿಸಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಈ ನಿರ್ಧಾರ ಮಾಡಿದ್ದು, ‘ನಮ್ಮ ಕಾಂಗ್ರೆಸ್’ ಎನ್ನುವ ಹೆಸರಿನಲ್ಲಿ ಫೆ.6ರಿಂದಲೇ ಪತ್ರಿಕೆ ಆರಂಭವಾಗಲಿದೆ.
ಬಹುತೇಕ ಮಾಧ್ಯಮಗಳು ಬಿಜೆಪಿ ಪರ ನಿಲುವನ್ನು ಹೊಂದಿದ್ದು, ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಹುದು ಎನ್ನುವ ಕಾರಣಕ್ಕೆ ತನ್ನದೇ ಪತ್ರಿಕೆ ತರಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಹೇಳಲಾಗಿದೆ.
ರಾಜ್ಯಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆ, ಪಕ್ಷಕ್ಕಾಗಿ ದುಡಿದವರು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ, ಪಕ್ಷ ನಾಯಕರ ಹೇಳಿಕೆಗಳು ಕಾಂಗ್ರೆಸ್ಸಿನ ಹೊಸ ಪಾಕ್ಷಿಕ ಪತ್ರಿಕೆಯಲ್ಲಿ ಇರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ