ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಸುರೇಶ ಅಂಗಡಿಗೆ ನೀತಿ ಸಂಹಿತೆಯ ಬಿಸಿ ತಟ್ಟಿತು. ಇದರಿಂದಾಗಿ ಸುಮಾರು 20 ವರ್ಷದ ನಂತರ ಅವರು ಸರಕಾರಿ ಬಸ್ ನಲ್ಲಿ ಪ್ರಯಾಣಿಸಬೇಕಾಯಿತು.
ಯರಗಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು. ಈ ಸಭೆಗೆ ಅಂಗಡಿ ತಮ್ಮ ಸರಕಾರಿ ಕಾರಿನಲ್ಲಿ ತೆರಳಿದ್ದರು.
ಆದರೆ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ನೀತಿ ಸಂಹಿತೆ ಜಾರಿಗೆ ಬಂದಿದೆ. ನಿಮ್ಮ ಕಾರನ್ನು ವಶಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸುರೇಶ ಅಂಗಡಿ ಮತ್ತು ಅವರೊಂದಿಗೆ ತೆರಳಿದ್ದ ಬಿಜೆಪಿ ಬೆಳಗಾವಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ ಮತ್ತಿತರರು ಸರಕಾರಿ ಬಸ್ ನಲ್ಲಿ ವಾಪಸ್ ಬಂದರು.
ನನ್ನೊಂದಿಗೆ 5 ಜನ ಇದ್ದಾರೆ. ಒಬ್ಬರಿಗೆ 60 ರೂ.ಗಳಂತೆ 300 ರೂ. ಕೊಟ್ಟು ಟಿಕೆಟ್ ತೆಗೆಸಿದ್ದೇನೆ ಎಂದು ಅಂಗಡಿ ಪ್ರಗತಿವಾಹಿನಿಗೆ ತಿಳಿಸಿದರು.
ಕಳೆದ ಸುಮಾರು 20 ವರ್ಷದಿಂದ ಅವರು ಸರಕಾರಿ ಬಸ್ ಹತ್ತಿರಲಿಲ್ಲವಂತೆ. ನೀತಿಸಂಹಿತೆಯಿಂದಾಗಿ ಬಸ್ ಪ್ರಯಾಣದ ಹೊಸ ಅನುಭವ ಅವರದ್ದಾಯಿತು.