ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಘಟಕಗಳ ಹಿರಿಯ ನಾಯಕರೊಂದಿಗೆ ವೀಡಿಯೋ ಸಂವಾದ ನಡೆಸಿದರು.
ಮುಂಬರುವ ಕಾರ್ಯಕ್ರಮಗಳಾದ ಸಮರ್ಪಣಾ ದಿನ (ಫೆ.11), ಮೇರಾ ಪರಿವಾರ್-ಬಿಜೆಪಿ ಪರಿವಾರ್ (ಫೆ.12), ಮನ್ ಕಿ ಬಾತ್ (ಫೆ.24) ಕಮಲಜ್ಯೋತಿ ಸಂಕಲ್ಪ ದಿವಸ(ಫೆ.26), ಕಮಲ ಸಂದೇಶ ಬೈಕ್ rally(ಮಾರ್ಚಿ 2), ಶಕ್ತಿಕೇಂದ್ರ ಸಮಾವೇಶಗಳು, ಪ್ರಬುದ್ಧರ ಗೋಷ್ಠಿ, ಯುವ ಪಾರ್ಲಿಮೆಂಟ್, ಭಾರತ್ ಕೆ ಮನ್ ಕಿ ಬಾತ್- ಮೋದಿ ಕೆ ಸಾಥ್, ಮೇರಾ ಬೂತ್ ಸಬ್ ಸೆ ಮಜಬೂತ್, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿಗಳ ವೀಡಿಯೋ ಸಂವಾದ ಸೇರಿದಂತೆ ಅನೇಕ ಕಾರ್ಯಕ್ರಮಗಳ ಯಶಸ್ಸಿಗಾಗಿ ನಡೆದಿರುವ ಸಿದ್ಧತೆ ಕುರಿತು ರಾಜ್ಯದ ಮುಖಂಡರುಗಳಿಂದ ಅಮಿತ್ ಷಾ ಮಾಹಿತಿ ಪಡೆದುಕೊಂಡರು.
ಕೆ.ಎಸ್,ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಎನ್ ರವಿಕುಮಾರ್, ಮತಿ ಭಾರತಿ ಶೆಟ್ಟಿ, ವಕ್ತಾರರಾದ ಡಾ.ವಾಮನ್ ಆಚಾರ್ಯ, ಗೋ.ಮಧುಸೂದನ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ