Latest

ಬಿಜೆಪಿ ಕಾರ್ಯಕ್ರಮದ ವೇಳೆ ಕೆಲವರ ಅಸಮಾಧಾನ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸೋಮವಾರ ಆರಂಭವಾಗಲಿರುವ ವಿಧಾನಮಂಡಳದ ಅಧಿವೇಶನದ ವೇಳೆ ಬಿಜೆಪಿ ಹಮ್ಮಿಕೊಂಡಿರುವ ರೈತ ಸಮಾವೇಶದ ಸ್ಥಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭೂಮಿ ಪೂಜೆ ವೇಳೆ ಕೆಲವು ಕಾರ್ಯಕರ್ತರು ಗದ್ದಲವೆಬ್ಬಿಸಿದ್ದಾರೆ.

ಬೆಳಗಾವಿ ತಾಲೂಕು ಗ್ರಾಮೀಣ ಬಿಜೆಪಿ ಅಧ್ಯಕ್ಷರ ನೇಮಕ ಏಕಪಕ್ಷೀಯವಾಗಿ ನಡೆದಿದೆ. ಸಂಸದ ಸುರೇಶ ಅಂಗಡಿ ಒಬ್ಬರೇ ನಿರ್ಣಯ ತೆಗೆದುಕೊಂಡಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಚುನಾವಣೆ ಮೂಲಕ ಅಧ್ಯಕ್ಷರನ್ನು ನೇಮಕ ಮಾಡಬೇಕು. 17 ಜನ ಆಕಾಂಕ್ಷಿಗಳಿದ್ದರೂ ಯಾರನ್ನೂ ಕೇಳದೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ಪ್ರಗತಿವಾಹಿನಿ ಸಂಸದ ಸುರೇಶ ಅಂಗಡಿ ಅವರನ್ನು ವಿಚಾರಿಸಿದಾಗ, ಅಧ್ಯಕ್ಷರ ನೇಮಕ ನಾನು ಮಾಡಿಲ್ಲ. ಜಿಲ್ಲಾ ಅಧ್ಯಕ್ಷರು, ಪಕ್ಷದ ವರಿಷ್ಠರು ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದರು.

ಪಕ್ಷ ಎಂದ ಮೇಲೆ ಕೆಲವರಿಗೆ ಅಸಮಾಧಾನವಿರುವುದು ಸಹಜ. ಈ ಹಿಂದೆ ಗ್ರಾಮೀಣ ಅಧ್ಯಕ್ಷರಾಗಿದ್ದ ನನ್ನ ಸಹೋದರನಿಗೆ ವಯಕ್ತಿಕ ಕಾರಣದಿಂದ ಆ ಜವಾಬ್ದಾರಿ ನಿರ್ವಹಿಸಲು ಆಗುತ್ತಿಲ್ಲ ಎಂದು ರಾಜಿನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆಯೇ ಬೇರೆಯವರನ್ನು ನೇಮಿಸುವಂತೆ ತಿಳಿಸಲಾಗಿತ್ತು. ಆದರೆ ಇಂದು ಅಲ್ಲಿ ಕೂಗಾಡಿದವರು ಯಾರು, ಪಕ್ಷದಲ್ಲಿ ಅವರ ಜವಾಬ್ದಾರಿ ಏನು ಎನ್ನುವುದು ನನಗೆ ಗೊತ್ತಿಲ್ಲ ಎಂದು ಅಗಡಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button