Latest

ಬಿಜೆಪಿ ನಾಯಕರು ಮುದಿ ನಾಯಿಯಂತೆ ಕಾಯುತ್ತಿದ್ದಾರೆ ಎಂದ ಸಚಿವ ಡಿ.ಸಿ.ತಮ್ಮಣ್ಣ!

 

 

   ಪ್ರಗತಿವಾಹಿನಿ ಸುದ್ದಿ, ಮಂಡ್ಯ

‘ರಾಜ್ಯದ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕರು ಮುದಿ ನಾಯಿಯಂತೆ ಕಾಯುತ್ತಿದ್ದಾರೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಶುಕ್ರವಾರ ಮಂಡ್ಯದಲ್ಲಿ ಮಾತನಾಡಿದ  ಅವರು, ‘ಒಂದೇ ಪಕ್ಷದ ಸರ್ಕಾರ ಇದ್ದರೂ ಅಸಮಾಧಾನವಿರುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಅದು ಸಹಜ’ ಎಂದರು. ‘ಸರ್ಕಾರ ಸುಭದ್ರವಾಗಿದ್ದು ಯಾವುದೇ ತೊಂದರೆ ಇಲ್ಲ. ಸರ್ಕಾರದ ಬಗ್ಗೆ ಹೇಳಿಕೆ ನೀಡುವುದು ಕೆಲವರಿಗೆ ಚಟ ಆಗಿದೆ. ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಾ, ಸರ್ಕಾರ ಬೀಳುತ್ತದೆ’ ಎಂದು ಕಾದು ಕುಳಿತಿದ್ದಾರೆ’ ಎಂದು ತಮ್ಮಣ್ಣ ಆರೋಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button