ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದಲ್ಲಿ ಇನ್ನೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಶಾಂತಿ ಮಾತುಕತೆಗೆ ಒಂದು ವೇದಿಕೆ ನಿರ್ಮಾಣವಾಗಲಿದೆ. ಆದ್ದರಿಂದ ಮೋದಿ ಮತ್ತೊಮ್ಮೆ ಭಾರತದಲ್ಲಿ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದಾರೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಹೇಳಿದರು.
ಬಿಜೆಪಿಯಿಂದ ಪ್ರತಿ ಕ್ಷೇತ್ರಕ್ಕೆ 2 ಎಲ್ಇಡಿ ಪ್ರಚಾರ ವಾಹನ
ಶುಕ್ರವಾರ ಮೋದಿ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಎಲ್‌ಇಡಿ ಸ್ಕ್ರೀನ್ ಮೂಲಕ ಮಾಹಿತಿ ನೀಡುವ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ದೇಶವನ್ನೇ ಬಿಡುತ್ತೇನೆ ಎಂದು ಹೇಳಿದ್ದರು. ಈಗ ಅವರ ಪುತ್ರ, ಲೋಕೋಪಯೊಗಿ ಸಚಿವ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿರುವುದು ಹಾಸ್ಸಾಸ್ಪದ ಸಂಗತಿ ಎಂದರು.
ಏ.೨೩ ರ ನಂತರ ದೇಶದ ಜನತೆ ಇನ್ನೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಿ ಜೆಡಿಎಸ್ ನ್ನು ತಿರಸ್ಕಾರ ಮಾಡಿ ಕಸದ ತೊಟ್ಟಿಗೆ ಹಾಕಲಿದ್ದಾರೆ. ಆಗ ರೇವಣ್ಣ ರಾಜಕೀಯ ನಿವೃತಿ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ಮುಖಂಡರಾದ ರಾಜು ಚಿಕ್ಕನಗೌಡ್ರ, ಈರಪ್ಪ ಅಂಗಡಿ, ವಿಜಯ ಗುಡದರಿ, ಯಲ್ಲೇಶ ಕೊಲಕಾರ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ