Latest

ಬಿಬಿಎಂಪಿ ಸದಸ್ಯೆಯರಿಗೆ ಕಿರುಕುಳ: ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಬೆಂಗಳೂರು ಮಹಾನಗರ ಪಾಲಿಕೆ ಜೆ.ಪಿ. ಪಾರ್ಕ್ ವಾರ್ಡ್‌ನ ಬಿಜೆಪಿ ಸದಸ್ಯೆ ಮಮತಾ ವಾಸುದೇವ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ನೀಡಿ, ಸುಳ್ಳು ಕೇಸ್ ಗಳನ್ನು ದಾಖಲೆ ಸೃಷ್ಟಿ ಮಾಡಿ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸಹವಕ್ತಾರರಾದ ಮಾಳವಿಕ ಅವಿನಾಶ್ ಆರೋಪಿಸಿದರು.
ತುಂಬಾ ದಿನಗಳಿಂದ ಮಮತಾ ವಾಸುದೇವ ಅವರ ಜೊತೆಗೆ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆ ಆಶಾ ಸುರೇಶ, ಜೆ.ಡಿ.ಎಸ್. ಬಿಬಿಎಂಪಿ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಈ ಮೂವರಿಗೆ ತುಂಬಾ ಕಿರುಕುಳ ಹಾಗೂ ನೋವು ಕೊಡುತ್ತಿದ್ದಾರೆ. ಆ ಭಾಗದ ಶಾಸಕ ಮುನಿರತ್ನ ಅವರ ಹಿಂಬಾಲಕರು ಈ ಮೂವರಿಗೆ ದುಷ್ಯಾಶನನ ರೀತಿಯಲ್ಲಿ  ಹಿಂಸೆ ಕೊಟ್ಟಿದ್ದಾರೆ ಎಂದರು.
ಹಿಂದಿನ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಮುನಿರತ್ನ ಅವರ ಅಪಾರ್ಟ್ಮೆಂಟ್ ನಲ್ಲಿ ಕೆಲವು ನಕಲಿ ಐಡಿಗಳು ಪತ್ತೆ ಆಗಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯೆಯರು ಪ್ರತಿಭಟನೆ ಮಾಡಿದ್ದರು‌. ಅದರ ಹಿನ್ನೆಲೆಯಲ್ಲಿ ಮಮತಾ ವಾಸುದೇವ ಅವರ ಮೇಲೆ ನಾಲ್ಕು ಕೇಸ್ ಗಳನ್ನು ರಾಜಕೀಯವಾಗಿ ಹಾಕಿದ್ದಾರೆ. ಆ ಕೇಸ್ ಗಳು ಕೋರ್ಟ್ ಮುಂದೆ ಇದೆ ಎಂದು ಹೇಳಿದರು. 
ಮಮತಾ ಅವರ ಮನೆಗೆ ನಿನ್ನೆ ಡಿಸಿಪಿಯಿಂದ ನೋಟಿಸ್ ಕಳಿಸಿದ್ದಾರೆ. ಅದೇನೆಂದರೆ, ಮಮತಾ ಮತ್ತು ಇನ್ನಿತರ ಸದಸ್ಯೆಯರು ಆ ಕೇಸ್ ಗಳಲ್ಲಿ ಸರಣಿ ಅಪರಾಧಿಗಳಾಗಿದ್ದಾರೆ. ಆ ಕಾರಣದಿಂದ ಅವರು ರಾಜಕೀಯವಾಗಿ ಈ ಚುನಾವಣೆಯಲ್ಲಿ ಯಾವ ಕೆಲಸದಲ್ಲೂ ಭಾಗಿ ಆಗಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು ಮತ್ತು ಒಂದು ಲಕ್ಷದ ಬಾಂಡ್ ಕೊಡಬೇಕು ಎಂದು ನೋಟಿಸ್ ಕಳಿಸಿದ್ದಾರೆ ಎಂದರು.
ಆ ಭಾಗದ ಶಾಸಕರು ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಸದಸ್ಯೆಯರು ಈ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೇ ಇರಲಿ ಎಂದು ತುಂಬಾ ಕಿರುಕುಳ ಮತ್ತು ಬೆದರಿಕೆ ಹಾಕುತ್ತಾರೆಂದು  ಹೇಳಿದರು.
ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಮಾಳವಿಕ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಹವಕ್ತಾರೆ  ಸಿ.ಮಂಜುಳಾ, ಬಿಬಿಎಂಪಿ ಸದಸ್ಯರಾದ  ಮಮತಾ ವಾಸುದೇವ, ದೀಪಾ ನಾಗೇಶ, ಬಿಜೆಪಿ ವಕೀಲ ಪ್ರಕೋಷ್ಠದ ಸಹಸಂಚಾಲಕರಾದ  ರಾಜಶೇಖರ,  ನೇತ್ರಾವತಿ ಜೊತೆಗಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button