*ಬೀರೇಶ್ವರ ಸೊಸೈಟಿಯ ಸದಸ್ಯರಿಗೆ 12% ಲಾಭಾಂಶ ಹಾಗೂ ಸಿಬ್ಬಂದಿಗಳಿಗೆ 10% ಬೋನಸ್ ವಿತರಣೆ*: *ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ : ಬಹುರಾಜ್ಯ ಸಹಕಾರಿ ಕ್ಷೇತ್ರದಲ್ಲೊಂದು ಮೈಲಿಗಲ್ಲು ಸ್ಥಾಪಿಸಿರುವ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿರುವ ಪ್ರಮುಖ ಸಂಸ್ಥೆಯಾದ ‘ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಬಹುರಾಜ್ಯ)’ ಸಂಸ್ಥೆಯು 2025-26 ನೇ ಸಾಲಿನಲ್ಲಿಯೂ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯ ನಿರ್ಣಯದಂತೆ ಈ ಸಾಲಿನಲ್ಲಿ ಸದಸ್ಯರಿಗೆ ಷೇರು ಲಾಭಾಂಶ ಹಾಗೂ ಸಿಬ್ಬಂದಿ ವರ್ಗಕ್ಕೆ ಬೋನಸ್ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ .
ಸನ್ 1991ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಬಹುರಾಜ್ಯ ಕಾಯ್ದೆ 2002ರ ಅಡಿಯಲ್ಲಿ ನೋಂದಣಿಯಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿ 180, ಮಹಾರಾಷ್ಟ್ರದಲ್ಲಿ 50 ಹಾಗೂ ಗೋವಾದಲ್ಲಿ 5 ಶಾಖೆಗಳು ಸೇರಿದಂತೆ ಒಟ್ಟು 235 ಶಾಖೆಗಳ ಮೂಲಕ ಸುಮಾರು 4.60 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ.
ಆರ್ಥಿಕ ಪ್ರಗತಿ (ದಿನಾಂಕ 30-09-2026 ರವರೆಗೆ):ಒಟ್ಟು ಠೇವಣಿಗಳು: ರೂ. 5754.96 ಕೋಟಿ
ವಿತರಿಸಲಾದ ಸಾಲ: ರೂ. 4121.05 ಕೋಟಿ
ಕಳೆದ ಆರ್ಥಿಕ ವರ್ಷದ ನಿವ್ವಳ ಲಾಭ (2025-26): ರೂ. 51.04 ಕೋಟಿ
ಸಂಸ್ಥೆಯ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ:
ಸದಸ್ಯರಿಗೆ ಲಾಭಾಂಶ: ಸನ್ 2024-25ನೇ ಸಾಲಿನ ರೂ. 34,92,16,400/- ಷೇರು ಹಣದ ಮೇಲೆ ಶೇಕಡಾ 12ರಂತೆ ಒಟ್ಟು ರೂ. 4,19,05,968/- ಗಳನ್ನು ಒಟ್ಟು 4,08,233 ಸದಸ್ಯರಿಗೆ ಲಾಭಾಂಶವನ್ನು ತಮ್ಮ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ ಸದಸ್ಯರು ತಮ್ಮ ಖಾತೆಯಿಂದ ಲಾಭಾಂಶ ಪಡೆದುಕೊಳ್ಳಬಹುದು.
ಸಿಬ್ಬಂದಿಗಳಿಗೆ ಬೋನಸ್: 2025-26ನೇ ಸಾಲಿನ ನಿವ್ವಳ ಲಾಭದ ಶೇ. 10ರಷ್ಟು ಅಂದರೆ ರೂ. 3,68,54,855/- ಗಳನ್ನು ಒಟ್ಟು 1476 ಸಿಬ್ಬಂದಿಗಳಿಗೆ ಬೋನಸ್ ರೂಪದಲ್ಲಿ ಹಂಚಲಾಗುತ್ತಿದೆ.
ಸಂಸ್ಥೆಯ ಸಂಸ್ಥಾಪಕರು, ಚಿಕ್ಕೋಡಿಯ ಮಾಜಿ ಸಂಸದರು ಹಾಗೂ ಡಿಸಿಸಿ ಬ್ಯಾಂಕ್ ಬೆಳಗಾವಿಯ ಅಧ್ಯಕ್ಷರಾದ ಶ್ರೀಯುತ ಅಣ್ಣಾಸಾಹೇಬ ಶಂಕರ ಜೊಲ್ಲೆ ಇವರ ಮುಂದಾಳತ್ವದಲ್ಲಿ ಮತ್ತು ಸಹಸಂಸ್ಥಾಪಕರು, ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಇವರ ಸೂಕ್ತ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆಯ ಈ ಅಮೋಘ ಬೆಳವಣಿಗೆಗೆ ಸದಸ್ಯರ ವಿಶ್ವಾಸ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣ ಎಂದು ಆಡಳಿತ ಮಂಡಳಿಯು ಹರ್ಷ ವ್ಯಕ್ತಪಡಿಸಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಪ್ರಸಾದ ಜೊಲ್ಲೆ,ಸಂಸ್ಥೆಯ ಅಧ್ಯಕ್ಷರಾದ ಅಪ್ಪಾಸಾಹೇಬ ಜೊಲ್ಲೆ,ಉಪಾಧ್ಯಕ್ಷರಾದ ಆನಂದ ಪಾಟೀಲ,ನಿರ್ದೇಶಕರಾದ ಯಾಸಿನ್ ತಾಂಬೂಲೆ,ಚೇತನ ದೇಶಪಾಂಡೆ,ಪ್ರಧಾನ ವ್ಯವಸ್ಥಾಪಕರಾದ ಬಹದ್ದೂರ ಗುರವ,ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ,ರಮೇಶ ಕುಂಬಾರ,ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶೇಖರ ಪಾಟೀಲ ಉಪಸ್ಥಿತರಿದ್ದರು.
ದಸರಾ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು: ಸಂಸ್ಥೆಯ ಈ ವಿಶೇಷ ಸಂದರ್ಭದಲ್ಲಿ ಆಡಳಿತ ಮಂಡಳಿಯ ವತಿಯಿಂದ ಸಮಸ್ತ ಸಹಕಾರಿ ಸದಸ್ಯ ಬಾಂಧವರಿಗೆ, ಹಿತೈಷಿಗಳಿಗೆ ಹಾಗೂ ಪತ್ರಿಕಾ ಮಾಧ್ಯಮದ ಮಿತ್ರರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




