ಪ್ರಗತಿವಾಹಿನಿ ಸುದ್ದಿ, ಅಗಸಗಿ
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ನಿವಾಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಸಂತೋಷ ಪಾಟೀಲ ಮನೆಗೆ ಗುರುವಾರ ಮುಂಜಾನೆ 4.30ಕ್ಕೆ ನುಗ್ಗಿದ ಕಳ್ಳರು ಬೀಗ ಮುರಿದು ಮನೆಯಲ್ಲಿದ್ದ 2 ಲಕ್ಷ ರೂ. ನಗದು , ಚಿನ್ನ ,ಬೆಳ್ಳಿ ಮತ್ತು ಬೆಲೆಬಾಳುವ ಸಾಮಾನುಗಳು ಸೇರಿ ಅಂದಾಜು 3.50 ಲಕ್ಷ ಮೌಲ್ಯದ ಕಳ್ಳತನ ಮಾಡಿದ್ದಾರೆ.
ಕಾಕತಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಸಿ ಪಿ ಐ ಶ್ರೀಶೈಲ ಕೌಜಲಗಿ, ಪಿ ಎಸ್ ಐ ಅರ್ಜುನ ಹಂಚಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. 4 ಜನ ಕಳ್ಳರಲ್ಲಿ ಇಬ್ಬರ ಮುಖ ಪತ್ತೆಯಾಗಿದ್ದು, ಸೆರೆ ಹಿಡಿಯುವುದಾಗಿ ಪೊಲೀಸರು ತಿಳಿಸಿದರು . ಇದೆ ಸಮಯದಲ್ಲಿ ಕಳ್ಳರು ಅದೆ ಗ್ರಾಮದ ಇನ್ನೂ 5 ಸಣ್ಣ ಪುಟ್ಟ ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ