Latest

ಬೆಳಗಾವಿ ವಿವಿಧ ಬಡಾವಣೆಗಳಲ್ಲಿ ಡಾ.ಪ್ರಭಾಕರ ಕೋರೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಮೋದಿಯವರ ಸಮರ್ಥ ನೇತೃತ್ವದಲ್ಲಿ ನವಭಾರತ ಇಂದು ಅಭಿವೃದ್ಧಿಯತ್ತ ಮುನ್ನಡೆದಿದೆ. ರಾಷ್ಟ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುವುದೇ ಭಾರತೀಯ ಜನತಾ ಪಕ್ಷದ ಪರಮಗುರಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ  ಹೇಳಿದರು.

Home add -Advt

ಅವರು ಸುರೇಶ ಅಂಗಡಿ  ಪರವಾಗಿ ಬೆಳಗಾವಿ ಮಾಳಮಾರುತಿ, ಶ್ರೀನಗರ, ವಂಟಮುರಿ ಕಾಲನಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೆ  ಭೇಟಿ ನೀಡಿ ಮತಯಾಚಿಸಿದರು.
ಕಳೆದ ಆರೇಳು ದಶಕಗಳಿಂದ ಕಾಂಗ್ರೆಸ್ ಸರ್ಕಾರ ದೇಶವನ್ನು ಸಾಕಷ್ಟು ಕೊಳ್ಳೆ ಹೊಡೆದಿದೆ. ದೇಶವನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಿಸಿಕೊಂಡಿದೆ. ಸಾಮಾನ್ಯ ಜನತೆಯ ಆಶೋತ್ತರಗಳನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ಮೈಮರೆತಿರುವುದು ದೇಶದ ಜನತೆಗೆ ಗೊತ್ತಿರುವ ಸಂಗತಿ ಎಂದರು. ಮೋದಿಯವರು ಕಳೆದ ಐದು ವರ್ಷಗಳಲ್ಲಿ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಭಾರತವನ್ನು ವಿಶ್ವದ ಪ್ರಮುಖ ದೇಶಗಳು ವಿಸ್ಮಯವಾಗಿ ನೋಡುವಂತೆ ಮಾಡಿದ್ದಾರೆ. ದೇಶವನ್ನು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಬಲಪಡಿಸುವಲ್ಲಿ ಅವರು ವಹಿಸಿರುವ ಮುತುವರ್ಜಿ ಅಷ್ಟಿಷ್ಟಲ್ಲ. ಮೋದಿಯವರ ಸರ್ಕಾರ  ಬಹುಮತದಿಂದ ಆಯ್ಕೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅನಿಲ ಬೆನಕೆ, ನ್ಯಾಯವಾದಿ ಎಂ.ಬಿ. ಜಿರಲಿ, ಕಿರಣ ಜಾಧವ, ಜ್ಯೋತಿ ಬಾವಿಕಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button