Latest

ಬೆಳಗಾವಿ ಹನುಮಾನ ನಗರದಲ್ಲಿ ಮನೆ, ವಾಹನ ಕಳ್ಳತನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಹನುಮಾನ ನಗರದಲ್ಲಿ ಬಿಲ್ಡರ್ ಒಬ್ಬರ ಮನೆಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೂ ಕಳುವು ಮಾಡಲಾಗಿದೆ.

ಎಂಜಿನಿಯರ್ ಶ್ರೀಶೈಲ ಪುಡಕಲಕಟ್ಟಿ ತಮ್ಮ ಮತ್ತೊಂದು ಕಾರಿನ ಸರ್ವೀಸಿಂಗ್ ಮಾಡಿಸಲು ಕುಟುಂಬ ಸಮೇತ ಕೊಲ್ಲಾಪುರಕ್ಕೆ ತೆರಳಿದ್ದರು. ರಾತ್ರಿ ಅಲ್ಲಿಯೇ ತಂಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು 10 ಸಾವಿರ ರೂ. ನಗದು, ಸ್ವಲ್ಪ ಬಂಗಾರ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಾರಿನ ಕೀ ಮನೆಯ ಶೋ ಕೇಸ್ ನಲ್ಲಿ ಇಡಲಾಗಿತ್ತು. ಅದನ್ನು ಬಳಸಿ ಕಾರನ್ನು ಕದ್ದೊಯ್ಯಲಾಗಿದೆ ಎಂದು ಎಸಿಪಿ ನಾರಾಯಣ ಭರಮನಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ. 

Home add -Advt

 

 

 

Related Articles

Back to top button